ಸುಳ್ಯದಲ್ಲಿ ಶ್ರೀ ನರೇಂದ್ರ ಮೋದಿ ಕಪ್ -2023 ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ

0

ಜಗ ಮೆಚ್ಚಿದ ನಾಯಕ ಪ್ರಧಾನಿ ಮೋದಿಯವರ ತತ್ವ ಆದರ್ಶ ಪಂದ್ಯಾಟದ ಆಯೋಜನೆಗೆ ಯುವಕರಿಗೆ ಪ್ರೇರಣೆಯಾಗಿದೆ-ಎಸ್.ಅಂಗಾರ

ಆಲೆಟ್ಟಿ ಗ್ರಾಮದ ಕೋಲ್ಚಾರು ನರೇಂದ್ರ ಮೋದಿ ಅಭಿಮಾನಿ ಬಳಗದ ಆಶ್ರಯದಲ್ಲಿ ಸುಳ್ಯ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ದಾಖಲೆಯ ಮೊತ್ತದ ಬಹುಮಾನಗಳನ್ನೊಳಗೊಂಡ 10 ತಂಡಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಶ್ರೀ ನರೇಂದ್ರ ಮೋದಿ ಕಪ್ -2023 ಜ.14 ಮತ್ತು 15 ರಂದು ಸುಳ್ಯದ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆಯಿತು.
ಪಂದ್ಯಾಟದ ಉದ್ಘಾಟನೆ ಯನ್ನು ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರು ನೆರವೇರಿಸಿದರು.
ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಆಲೆಟ್ಟಿ ಪಂಚಾಯತ್ ಅದ್ಯಕ್ಷ ಪುಷ್ಪಾವತಿ ಕುಡೆಕಲ್ಲು, ಅರಂತೋಡು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ‌ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಬಿಜೆಪಿ ಮಂಡಲ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ, ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಆಲೆಟ್ಟಿ ಪಂಚಾಯತ್ ಸದಸ್ಯೆ ಶ್ರೀಮತಿ ಶಂಕರಿ ಕೊಲ್ಲರಮೂಲೆ ಉಪಸ್ಥಿತರಿದ್ದರು. ಆಲೆಟ್ಟಿ ಬಿಜೆಪಿ ಶಕ್ತಿ ಕೇಂದ್ರ ದ ಅಧ್ಯಕ್ಷ ಪ್ರದೀಪ್ ಕೊಲ್ಲರಮೂಲೆ ಸ್ವಾಗತಿಸಿದರು. ಇಂಜಿನಿಯರ್ ಪ್ರಣೀತ್ ಕಣಕ್ಕೂರು ವಂದಿಸಿದರು. ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿದರು.


ಪಂದ್ಯಾಟದ ಸಮಾರೋಪ ಸಮಾರಂಭ ಸಂಜೆ ನಡೆಯಲಿದೆ. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು.
ಪ್ರಥಮ ಬಹುಮಾನ ರೂ.51,111/- ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ.25,111/- ಮತ್ತು ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳನ್ನು ನಿಗದಿ ಪಡಿಸಲಾಗಿದೆ. ಪಂದ್ಯಾಟವನ್ನು ಕೋಲ್ಚಾರು ನರೇಂದ್ರ ಮೋದಿ ಅಭಿಮಾನಿ ಬಳಗ ದವರು ಆಯೋಜಿಸಿರುತ್ತಾರೆ.