ಆನಂದ ಎಲಿಕ್ಕಳ ನಿಧನ

0

ಆಲೆಟ್ಟಿ ಗ್ರಾಮದ ಎಲಿಕ್ಕಳ ನಿವಾಸಿ ದಿ.ಬೋರ ಎಂಬವರ ಪುತ್ರ ಆನಂದ ರವರು ಇಂದು ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಅವರಿಗೆ ಇಂದು ಬೆಳಗ್ಗೆ ಮನೆಯಲ್ಲಿರುವ ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಸ್ಥಳೀಯರು ಸೇರಿ ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದು ಕೊಂಡು ಹೋಗುವಂತೆ ತಿಳಿಸಿದರು. ಮಂಗಳೂರಿಗೆ ಹೋಗುತ್ತಿರುವ ಸಂದರ್ಭ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಮೃತರು ಅವಿವಾಹಿತರಾಗಿದ್ದು ಅತ್ತಿಗೆ ಶ್ರೀಮತಿ ಲಲಿತಾ, ಸೊಸೆ ಮಲ್ಲಿಕಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.