ದುಗ್ಗಲಡ್ಕದಲ್ಲಿ ಮಿತ್ರ ಕುರಲ್ ಸಾಂಸ್ಕೃತಿಕ ಉತ್ಸವ ಉದ್ಘಾಟನೆ

0

ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ಮಿತ್ರ ಕುರಲ್ ಸಾಂಸ್ಕೃತಿಕ ಉತ್ಸವ -2023 ಜ.29ರಂದು ದುಗ್ಗಲಡ್ಕದ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ನಡೆಯಿತು.


ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಅಧ್ಯಕ್ಷರಾದ ಡಾl ಉಮ್ಮರ್ ಬೀಜದಕಟ್ಟೆ ನೆರವೇರಿಸಿದರು.ಸಭಾಧ್ಯಕ್ಷತೆಯನ್ನು ಕುರಲ್ ತುಳುಕೂಟದ ಅಧ್ಯಕ್ಷೆ ನವ್ಯದಿನೇಶ್ ಕೊಯಿಕುಳಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪಾ ಜೆ.ರೈ , ದುಗ್ಗಲಡ್ಕ ಪ್ರೌಢಶಾಲಾ ಶಿಕ್ಷಕ ಉನ್ನಿಕೃಷ್ಣನ್, ಕೊಯಿಕುಳಿ ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಮಾಧವ ಮೂಕಮಲೆ,ಬಿ.ಸಿ‌.ರೋಡ್ ನ ಹಿರಿಯ ನ್ಯಾಯವಾದಿ ರಾಮಣ್ಣ ಗೌಡ ದೇವರಮನೆ ,ಮಂಗಳೂರು ಹೋಂ ಇಲೆಕ್ಟ್ರಾನಿಕ್ಸ್ ಮಾಲಕ ರಜತ್ ಆರ್.ಕಾಮತ್, ದುಗ್ಗಲಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಿತ್ರಾ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಚೇತನ್ ಕಲ್ಮಡ್ಕ, ಗೌರವಾಧ್ಯಕ್ಷ ದಿನೇಶ್ ಕೊಯಿಕುಳಿ,ಕಾರ್ಯದರ್ಶಿ ಪ್ರದೀಪ್ ಕೊಯಿಕುಳಿ, ಕೋಶಾಧಿಕಾರಿ ಚಿದಾನಂದ ಕೊಯಿಕುಳಿ, ಕುರಲ್ ತುಳುಕೂಟದ ಗೌರವಾಧ್ಯಕ್ಷ ನಾರಾಯಣ ಟೈಲರ್, ಕೋಶಾಧಿಕಾರಿ ಶೇಖರ್ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು. ಕಾರ್ಯದರ್ಶಿ ಮನೋಜ್ ಪಾನತ್ತಿಲ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here