ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕೋತ್ಸವ

0

ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕೋತ್ಸವ ಜ. 29 ಮತ್ತು 31ರ ತನಕ ಜರಗಲಿದೆ.
ಜ. 29ರಂದು ಸಾಯಂಕಾಲ ಗೋಧೂಳಿ ಲಗ್ನದಲ್ಲಿ
ಶ್ರೀ ಕ್ಷೇತ್ರ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ಕವಾಟ ಉದ್ಘಾಟನೆ, ದೇವರ ಪ್ರಾರ್ಥನೆ, ವಾಸ್ತು ಪೂಜೆ, ಕ್ಷೇತ್ರ ಶುದ್ಧೀಕರಣ ನಡೆಯಿತು.

ಜ. 30ರಂದು ಬೆಳಿಗ್ಗೆ
ಸ್ವಸಿ ಪುಣ್ಯಾಹವಾಚನೆ ನಿರ್ಮಾಲ್ಯ ವಿಸರ್ಜನೆ ಪೂಜೆ, ಪ್ರತ್ಯೇಕ ಪ್ರತ್ಯೇಕ ಕಲಶಾಧಿವಾಸ, ಪ್ರಧಾನ ಹೋಮ, ಪಂಚಾಮೃತ ಸಹಿತ ಕಲಶಾಭಿಷೇಕ, ದೇವತಾರಾಧನೆ, ದೈವರಾಧನೆ, ಪ್ರಸನ್ನ ಪೂಜೆ, ರಾತ್ರಿ
ಸಂಧ್ಯಾಕಾಲ ದುರ್ಗಾನಮಸ್ಕಾರ ಪೂಜೆ, ಪ್ರಸಾದ ವಿತರಣೆ, ನಾಗ ದೇವರಲ್ಲಿ ಪುಣ್ಯಾಹವಾಚನೆ, ಪವಮಾನಯಾಗ, ನವಕ ಪ್ರಧಾನ, ಪಂಚಾಮೃತ ಸಹಿತಕಲಶಾಭಿಷೇಕ, ರಕ್ತೇಶ್ವರಿ ಆರಾಧನೆ, ಆಶ್ಲೇಷ ಬಲಿ ಪೂಜೆ, ನಾಗದೇವರ ತಂಬಿಲ, ಪ್ರಸನ್ನ ಪೂಜೆ ನಡೆಯಿತು.


ಇಂದು ಬೆಳಿಗ್ಗೆಯಿಂದ
ಸ್ವಸ್ತಿ ಪುಣ್ಯಾಹವಾಚನೆ, ನಿರ್ಮಾಲ್ಯ ವಿಸರ್ಜನೆ, ರುದ್ರ ಹೋಮ, ನವಗ್ರಹ ಹೋಮ, ಚಂಡಿಕಾ ನಡೆಯುತ್ತಿದ್ದು, ಅಪರಾಹ್ನ
ಹೋಮ-ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ ದೈವ ದೇವರ ಆರಾಧನೆ ಬಳಿಕ
ಅನ್ನಸಂತರ್ಪಣೆ,
ಸಾಯಂಕಾಲ ಗಂಟೆ 5.30ಕ್ಕೆ
ಸಂಧ್ಯಾಕಾಲ ಗುತ್ಯಮ್ಮ ದೇವಿಗೆ, ರಂಗ ಪೂಜಾ ಸೇವೆ ನಡೆಯಲಿದೆ. ದೇವಸ್ಥಾನದ ಧರ್ಮದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆ.ವಿ, ಮತ್ತು ಅವರ ಕುಟುಂಬ ವರ್ಗ, ಕೆ.ವಿ.ಜಿ. ವಿದ್ಯಾರ್ಥಿಗಳ ಸಿಬ್ಬಂದಿಗಳು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಂದಿನ ಕಾರ್ಯಕ್ರಮ ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳುತ್ತಿದೆ.