ಪೆರುವೋಡಿ : ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ

0

ಕ್ಷೇತ್ರದ ದೈವಗಳಿಗೆ ಭಕ್ತರಿಂದ ಸೇವಾರ್ಥವಾಗಿ ನಗ ಸಮರ್ಪಣೆ

ಮುಕ್ಕೂರು: ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ‌ ಅವರ ನೇತೃತ್ವದಲ್ಲಿ ಸೋಮವಾರ ಪ್ರಾರಂಭಗೊಂಡು ಮಂಗಳವಾರ ಮುಂಜಾನೆ ಸಂಪನ್ನಗೊಂಡಿತು.

ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ ಮತ್ತು ಶುದ್ಧಿ ಕಲಶ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನೆರವೇರಿತು. ಬೆಳಂದೂರು ಶ್ರೀ ವಿಷ್ಣುಪ್ರಿಯ ಮಹಿಳಾ ಭಜನ ಮಂಡಳಿಯಿಂದ ಭಜನ ಕಾರ್ಯಕ್ರಮ ನಡೆಯಿತು. ರಾತ್ರಿ ರಂಗಪೂಜೆ, ಮಹೋತ್ಸವ, ದರ್ಶನ ಬಲಿ,‌ ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆದು ಅನಂತರ ಗುಳಿಗ, ಪಂಜುರ್ಲಿ, ಶಿರಾಡಿ ದೈವದ ನೇಮ ನೆರವೇರಿತು. ಸೇವಾರ್ಥಿಗಳಿಂದ ಹೂವಿನ ಅಲಂಕಾರ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು.

ದೈವ ನಗ ಅರ್ಪಣೆ
ಈ ಸಂದರ್ಭದಲ್ಲಿ ಸುಮಾರು ಎರಡು ಲಕ್ಷ ರೂ. ಮೊತ್ತದ ದೈವದ ನಗ (ಆಭರಣ) ವನ್ನು ಕ್ಷೇತ್ರಕ್ಕೆ ಮೂವರು ಭಕ್ತರು ಅರ್ಪಿಸಿದರು. ಸುಬ್ರಾಯ ಭಟ್ ನೀರ್ಕಜೆ, ಎಂ.ಕೆ.ಉಮೇಶ್ ರಾವ್ ಕೊಂಡೆಪ್ಪಾಡಿ ಹಾಗೂ ಸಂತೋಷ್ ಕುಮಾರ್ ರೈ ಕಾಪು ಹಾಗೂ ಸಹೋದರರು ಸೇವಾ ರೂಪದಲ್ಲಿ ನೀಡಿದ್ದು ಮಂಗಳವಾರ ಬೆಳಗ್ಗೆ ರಾಜನ್ ದೈವಕ್ಕೆ ಸರ್ಮಪಿಸುವ ಮೂಲಕ ಸೇವಾರ್ಪಣಾ ಕಾರ್ಯ ನಡೆಯಿತು.

ಗೌರವಾರ್ಪಣೆ
ಕಳೆದ 26 ವರ್ಷದ ಕಾಲ ಕ್ಷೇತ್ರದ ಉತ್ಸವ ಸಮಿತಿ ಅಧ್ಯಕ್ಷರಾಗಿ ಹಾಗೂ ದೈವದ ಆಭರಣವನ್ನು ಒದಗಿಸುತಿದ್ದ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಪಿ.ಜಿ.ಭಾಸ್ಕರ ರೈ ಹಾಗೂ ಶ್ರೀಮತಿ ಸುಶೀಲ ಭಾಸ್ಕರ ರೈ ಅವರನ್ನು ಗೌರವಿಸಲಾಯಿತು. ದೈವದ ಆಭರಣ ತಯಾರಿಸಿದ ಕುಸುರಿ ಕೆಲಸಗಾರ ಪುರುಷೋತ್ತಮ ಪುಣ್ಚತ್ತಾರು ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ.ಬಾಲಚಂದ್ರ ರಾವ್, ಉತ್ಸವ ಸಮಿತಿ ಅಧ್ಯಕ್ಷ ದಯಾನಂದ ಗೌಡ ಜಾಲು, ಪ್ರಧಾನ ಅರ್ಚಕ ಸುರೇಶ್ ಉಪಾಧ್ಯಾಯ, ಮೊಕ್ತೇಸರರಾದ ಕುಂಬ್ರ ದಯಾಕರ ಆಳ್ವ, ಗೋಪಾಲಕೃಷ್ಣ ಭಟ್ ಕಾನಾವು, ವಸಂತ ಬೈಪಡಿತ್ತಾಯ ಮುಕ್ಕೂರು, ಕುಶಾಲಪ್ಪ ಗೌಡ ಪೆರುವಾಜೆ, ಸುಜಾತ ವಿ ರಾಜ್ ಕಜೆ, ಪುಷ್ಷಾವತಿ ಎಂ ಕಂಡಿಪ್ಪಾಡಿ, ಕೃಷ್ಣಪ್ಪ ನಾಯ್ಕ ದೇವಿಮೂಲೆ, ಊರ ಪ್ರಮುಖರಾದ ಎಂಕೆ.ಉಮೇಶ್ ರಾವ್ ಕೊಂಡೆಪ್ಪಾಡಿ, ಸುಬ್ರಾಯ ಭಟ್ ನೀರ್ಕಜೆ, ಮೋಹನ ಬೈಪಡಿತ್ತಾಯ, ರಾಮಚಂದ್ರ ಕೋಡಿಬೈಲು, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಗಣಪತಿ ಭಟ್ ನೀರ್ಕಜೆ, ನರಸಿಂಹ ಶರ್ಮಾ ಕಾನಾವು, ತೇಜಸ್ವಿ ನರಸಿಂಹ ಕಾನಾವು, ನಾಗರಾಜ ಭಟ್ ಕಜೆ, ದಾಮೋದರ ಗೌಡ ಕಂಡಿಪ್ಪಾಡಿ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ , ಮಂಜಪ್ಪ ರೈ ಬೆಳ್ಳಾರೆ, ಸತ್ಯಪ್ರಸಾದ್ ಕಂಡಿಪ್ಪಾಡಿ, ಸಚಿನ್ ರೈ ಪೂವಾಜೆ, ಸಂಜೀವ ಗೌಡ ಬೈಲಂಗಡಿ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಕೊರಗಪ್ಪ ಅನವುಗುಂಡಿ ಮೊದಲಾದವರು ಉಪಸ್ಥಿತರಿದ್ದರು.