ದಾಸನಕಜೆ ಕುಂಟಿಕಾನ ತರವಾಡು ಮನೆಯಲ್ಲಿ ಪ್ರತಿಷ್ಠಾ ಮಹೋತ್ಸವ, *ಅಣ್ಣಪ್ಪ ಪಂಜುರ್ಲಿ ಮತ್ತು ಸಪರಿವಾರ ದೈವಗಳ ಧರ್ಮನಡಾವಳಿ*

0

ಅಮರಮುಡ್ನೂರು ಗ್ರಾಮದಲ್ಲಿರುವ ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರ ಕುಟುಂಬ ದಾಸನಕಜೆ ಕುಂಟಿಕಾನ ತರವಾಡು ಮನೆಯ ಗೃಹಪ್ರವೇಶ ಹಾಗೂ ಹೊಸ ದೈವಸ್ಥಾನದಲ್ಲಿ ಧರ್ಮದೈವ ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ಸಹಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವವು ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕರಾಯರ ನೇತೃತ್ವದಲ್ಲಿ ಜ.31ರಿಂದ ಪ್ರಾರಂಭಗೊಂಡು ಫೆ.2ವರೆಗೆ ಪ್ರತಿಷ್ಠಾ ಮಹೋತ್ಸವ ಮತ್ತು ಧರ್ಮ ನಡಾವಳಿ ನಡೆಯಿತು.

ಜ.31ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಫೆ.1ರಂದು ಶ್ರೀ ಗಣಪತಿ ಹವನ, ಕಲಶ ಪೂಜೆ, ದೈವದ ಪ್ರತಿಷ್ಠೆ, ಗೃಹಪ್ರವೇಶ, ಕಲಶಾಭಿಷೇಕ, ತಂಬಿಲ, ಶ್ರೀ ಸತ್ಯನಾರಾಯಣ ದೇವರ ಪೂಜೆ, ಕ್ಷೇತ್ರಪಿಂಡ ವಿಸರ್ಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಶ್ರೀ ದೈವಗಳ ಭಂಡಾರ ತೆಗೆಯಲಾಯಿತು.ಸಂಜೆ ಗುಳಿಗ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ಮುಗ್ಗೇರ್ಲು, ಮಯ್ಯೊಂತಿ ದೈವಗಳ ನೇಮೋತ್ಸವ ನಡೆಯಿತು.

ಫೆ.2 ರಂದು ಬೆಳಿಗ್ಗೆ ಧರ್ಮದೈವ ಶ್ರೀ ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ನಡೆಯಿತು.ಬಳಿಕ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಕುಟುಂಬಸ್ಥರು,ಗ್ರಾಮಸ್ಥರು ಉಪಸ್ಥಿತರಿದ್ದರು.ಇಂದು ರಾತ್ರಿ ಶ್ರೀ ಪಾಷಾಣಮೂರ್ತಿ ಕೋಲ ನಡೆಯಲಿದೆ.