ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ತೆರಿಗೆ ಕುರಿತು ಮಾಹಿತಿ ಕಾರ್ಯಕ್ರಮ

0

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ತೆರಿಗೆ ಕುರಿತ ಮಾಹಿತಿ ಕಾರ್ಯಗಾರವು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ನಾಗರಾಜ್.ಕೆ ವಿಶ್ರಾಂತ ಉಪಆಯುಕ್ತರು ಕೇಂದ್ರ ತೆರಿಗೆ ಇಲಾಖೆ ಮಂಗಳೂರು ಇವರು ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಕಾನೂನು ಸಲಹಾ ಸಮಿತಿ ಸಂಯೋಜಕ ಲಕ್ಷ್ಮೀಕಾಂತ್. ಕೆ.ಎಲ್.ರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಂಜಲಿ, ಕವನ ಮತ್ತು ರಮ್ಯ ಪ್ರಾರ್ಥಿಸಿದರು. ಉಪಸ್ಯಾಸಕ ರಂಜನ್.ಕೆ.ಎನ್ ಸ್ವಾಗತಿಸಿ, ಉಪನ್ಯಾಸಕ ಲಕ್ಷ್ಮೀಕಾಂತ್ ಕೆ.ಎಲ್ ವಂದಿಸಿದರು. ಉಪನ್ಯಾಸಕಿ ರಶ್ಮಿ. ಹೆಚ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here