ಪಂಜ: ಜಾತ್ರೋತ್ಸವದ ಮಾಹಿತಿ ಕೇಂದ್ರ ಉದ್ಘಾಟನೆ

0

ಜೇಸಿ ಐ ಪಂಜ ಪಂಚಶ್ರೀ ಪ್ರಾಂತ್ಯ ಬಿ ವಲಯ 15 ಇದರ ವತಿಯಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ ವರ್ಷಾವಧಿ ಜಾತ್ರೋತ್ಸವ 2023 ರ ಮಾಹಿತಿ ಕೇಂದ್ರ ಹಾಗೂ ಚಪ್ಪಲಿ ಸ್ಟ್ಯಾಂಡ್ ನ ಸೇವೆ ಯ ಉದ್ಘಾಟನೆ ಕಾರ್ಯಕ್ರಮವು
ಫೆ.5 ದೇವಸ್ಥಾನ ಬಳಿಯಲ್ಲಿ ನಡೆಯಿತು.ಕಾರ್ಯಕ್ರಮದ
ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ವಹಿಸಿದ್ದರು.


ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೊಳಿಬೈಲುಗುತ್ತು ಉದ್ಘಾಟಿಸಿ. ವೇದಿಕೆಯಲ್ಲಿ
ನಿಕಟಪೂರ್ವ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು
ಕಾರ್ಯಕ್ರಮ ನಿರ್ದೇಶಕ ಪ್ರವೀಣ್ ಕಾಯರ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವಂದಿಸಿದರು.ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕರು ,ಸರ್ವ ಸದಸ್ಯರು ಭಾಗವಹಿಸಿದ್ದರು.