ಕುಕ್ಕಂದೂರು: ಜನರಿಗೆ ಉಪಟಳ ನೀಡುತ್ತಿದ್ದ ಒಂಟಿ ಮಂಗನನ್ನು ಸೆರೆಹಿಡಿದ ಅರಣ್ಯ ಸಿಬ್ಬಂದಿಗಳು

0

ಜಾಲ್ಸೂರು ಗ್ರಾಮದ , ಕುಕ್ಕುಂದೂರು ತಮಿಳು ಪುನರ್ವಸತಿದಾರರ ಕಾಲೋನಿಯಲ್ಲಿ ಕಳೆದ ಎರಡು ದಿನಗಳಿಂದ ಒಂಟಿ ಮಂಗವೊಂದು ಮಕ್ಕಳಿಗೆ ಮತ್ತು ಮಹಿಳೆಯರಿಗೆ ತೀವ್ರ ಉಪಟಳವನ್ನು ನೀಡುತ್ತಿದ್ದು, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಫೆ.6ರಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದಿಂದ ಮಂಗನನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳಾದ ಲೋಕೇಶ್, ಸಿಬ್ಬಂದಿಗಳಾದ ಮಂಜುನಾಥ, ಬಿಪಿನ್, ಪ್ರಾಣಿತಜ್ಞ ಝಕಾರಿಯ ಉಪ್ಪಿನಂಗಡಿ ಮತ್ತು ಕಾಲೋನಿ ನಿವಾಸಿಗಳಾದ ಶ್ರೀ ಸಚ್ಚಿದಾನಂದ, ರಾಕೇಶ್, ರಮೇಶ್, ಮಹಾವೀರ , ಪನ್ನೀರ್ ಸೆಲ್ವ ,ಸತ್ಯರಾಜ್,ಜೇಮಿಸ್ ಅಲೆಗ್ಸಾಂಡರ್, ಮತ್ತು ಸತ್ಯ ಶಾಂತಿ ತ್ಯಾಗ ಮೂರ್ತಿ ಹಾಗೂ ಕಾಲೋನಿಯ ನಿವಾಸಿಗಳ ಸಹಕಾರದೊಂದಿಗೆ ಮಂಗನನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು.