ನಾಳೆ ಗುತ್ತಿಗಾರಿನಲ್ಲಿ ಜೆ.ಎ.ಎನ್.ಜೆ.ಒ ಎಂಟರ್ಪ್ರೈಸಸ್ ಪೈ.ಲಿ. ವತಿಯಿಂದ ಮೆಗಾ ಲಕ್ಕಿ ಡ್ರಾ, ಆರೋಗ್ಯ ಕೇಂದ್ರಕ್ಕೆ ಟಿ.ವಿ ಕೊಡುಗೆ

0

ಗುತ್ತಿಗಾರಿನಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಜೆ.ಎ.ಎನ್.ಜೆ.ಒ ಎಂಟರ್ಪ್ರೈಸಸ್ ಪೈ.ಲಿ. ವತಿಯಿಂದ ಮೆಗಾ ಲಕ್ಕಿ ಡ್ರಾ ಹಾಗೂ ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಟಿ.ವಿ ವಿತರಣೆ ಕಾರ್ಯಕ್ರಮ ಫೆ.24 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ.
ಕೇರಳ ಕೇಂದ್ರೀಕೃತ ಎನ್ ಎಫ್ ಬಿ ಐ ಬಿಸಿನೆಸ್ ಸರ್ವಿಸ್ ಫ್ರಾಂಚೈಸಿ ಹೊಂದಿರುವ ಜೆ.ಎ.ಎನ್.ಜೆ.ಒ ಎಂಟರ್ಪ್ರೈಸಸ್ ಪೈ.ಲಿಮಿಟೆಡ್ ವತಿಯಿಂದ ಗುತ್ತಿಗಾರು ಗ್ರಾ.ಪಂ ನ ಸಭಾಭನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸೋಲಾರ್ ಇನ್ವರ್ಟರ್, ಟಿ.ವಿ ಇತ್ಯಾದಿಗಳ ಪ್ರದರ್ಶನ ಹಾಗೂ ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಸೈಕಲ್ ಡೆಮೋ ಇರುವುದು. 0% ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ವ್ಯವಸ್ಥೆ ಹಾಗೂ ತಿಂಗಳ ಕಡಿಮೆ ಕಂತಿನ ಸ್ಕೀಮ್ ವ್ಯವಸ್ಥೆ ‌ಇರಲಿದೆ. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಠಾಣಾ ಎಸ್ ಐ ಮಂಜುನಾಥ್, ಗುತ್ತಿಗಾರು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ, ಗುತ್ತಿಗಾರು ಸಂತ ಮರಿಯಮ್ಮ ಚರ್ಚ್ ನ ಫಾದರ್ ಆದರ್ಶ್ ಜೋಸೆಫ್‌ ಎಫ್ ಬಿ ಐ ನ ಮ್ಯಾನೇಜರ್ ಜಯದೀವ್ ಆಚಾರ್ಯ, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.