ರವಿಪ್ರಭಾ ಮಂಡೆಕೋಲುವರಿಗೆ ಪಿಎಚ್‌ಡಿ

0

ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್, ಬಂಟಕಲ್‌ ಉಡುಪಿ ಇಲ್ಲಿನ ರಸಾಯನಶಾಸ್ತ್ರ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕಿಯಾದ ಶ್ರೀಮತಿ ರವಿಪ್ರಭಾ ಕೆ ಅವರು ಮಂಡಿಸಿದ ” ಸ್ಟಡೀಸ್ ಆಫ್ ಕೊರೋಷನ್ ಇನ್ಹಿಬಿಶನ್ ಆಫ್ ಅಲ್ಯೂಮಿನಿಯಂ ಬೈ ಯುಸಿಂಗ್ ಸಿಂಪಲ್ ಆಂಡ್ ಫ್ಯೂಸ್ಡ್ ಹೀಟಿರೋಸೈಕ್ಲಿಕ್ ಕಂಪೊಂಡ್ಸ್ ಇನ್ ಅಸಿಡಿಕ್ ಮೀಡಿಯಂ ” ಎಂಬ ಸಂಶೋಧನಾ ಪ್ರಬಂಧಕ್ಕೆ ವಿಟಿಯು, ಬೆಳಗಾವಿ ಪಿಎಚ್. ಡಿ ಪದವಿ ನೀಡಿರುತ್ತದೆ.

ನಿಟ್ಟೆಯ ಎನ್‌.ಎಂ.ಎ.ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ರಮೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ಅವರು ಸಂಶೋಧನಾ ಪ್ರಬಂಧ ವನ್ನು ಮಂಡಿಸಿದ್ದರು. ಅವರು ಕಾಸರಗೋಡು ಜಿಲ್ಲೆಯ ಬಾಯರಿನ ದಿ. ವೆಂಕಟ್ರಮಣ ಭಟ್ ಮತ್ತು ಶ್ರೀಮತಿ ರಮಾಕಾಂತಿ ಯವರ ಪುತ್ರಿ ಹಾಗೂ ಮಂಡೆಕೋಲಿನ ದಿ.ನಾರಾಯಣ ಭಟ್ ಮತ್ತು ವಿಮಲ ಭಟ್ ಅವರ ಸೊಸೆ. ಇವರ ಪತಿ ಪ್ರಕಾಶ್ ಇವರು ನಿಟ್ಟೆ ವಿಶ್ವ ವಿದ್ಯಾಲಯದ ವಾಣಿಜ್ಯ ಮತ್ತು ಆಡಳಿತ ನಿರ್ವಹಣಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿ