ನ್ಯಾಯವಾದಿ ಸಂದೀಪ್ ಮದುವೆಗದ್ದೆಯವರು ಚೀಟಿ ನಿಬಂಧಕರ ನಾಮಿನಿ ವಕೀಲರಾಗಿ ನೇಮಕ

0

ಸುಳ್ಯದಲ್ಲಿ ವಕೀಲರಾಗಿರುವ ಸಂದೀಪ್ ಮದುವೆಗದ್ದೆಯವರು ಚೀಟಿ ನಿಧಿ ಅಧಿನಿಯಮ 1982 ರಡಿ ಚೀಟಿ ದಾವೆಗಳನ್ನು ಇತ್ಯರ್ಥಪಡಿಸಲು ಚೀಟಿ ನಿಬಂಧಕರ ನಾಮಿನಿ ವಕೀಲರಾಗಿ ನೇಮಕಗೊಂಡಿರುತ್ತಾರೆ.

ಇವರನ್ನು ಸಹಕಾರ ಸಂಘಗಳ ನಿಬಂಧಕರು ಹಾಗೂ ಚೀಟಿ ಮಹಾ ಪ್ರಬಂಧಕರು ಕರ್ನಾಟಕ ರಾಜ್ಯ, ಬೆಂಗಳೂರು ಇವರು ಬೆಂಗಳೂರು ನಗರ ಜಿಲ್ಲೆಯ ಚೀಟಿ ಸಂಸ್ಥೆಗೆ ಸಂಬಂಧಿಸಿದ ದಾವೆಗಳನ್ನು ಇತ್ಯರ್ಥಪಡಿಸಲು ನೇಮಕಗೊಳಿಸಿರುತ್ತಾರೆ.