ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಳಗುತ್ತಿಗೆ ನೌಕರರ ಪ್ರತಿಭಟನೆ, ಸುಳ್ಯದಲ್ಲೂ ಸಿಬ್ಬಂದಿಗಳ ಗೈರು ಹಾಜರಿ

0

ಕರ್ನಾಟಕ ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಳಗುತ್ತಿಗೆ ನೌಕರರ ಸಂಘ ಯನ್.ಎಚ್.ಯಂ. ಒಳಗುತ್ತಿಗೆ ನೌಕರರನ್ನು ಕಾಯಂ ಮಾಡುವಂತೆ ಒತ್ತಾಯಿಸಿ ಫೆ. 13ರಿಂದ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಮುಷ್ಕರ ನಡೆಸುತ್ತಿದ್ದು, ಸುಳ್ಯ ತಾಲೂಕಿನ ಅರೋಗ್ಯ ಇಲಾಖೆಯ ಯನ್.ಎಚ್.ಯಂ ಸಿಬ್ಬಂದಿಗಳು ಕರ್ತವ್ಯಕೆ ಗೈರು ಹಾಜರಾಗಿ ಮುಷ್ಕರ ನಡೆಸುತ್ತಿದ್ದಾರೆ.

ಸುಳ್ಯ ತಾಲೂಕು ಅರೋಗ್ಯ ಅಧಿಕಾರಿ ಕಛೇರಿಯ 10 ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಅರೋಗ್ಯ ಮತ್ತು ಕ್ಷೇಮ ಕೇಂದ್ರದ 49 ಸಿಬ್ಬಂದಿಗಳು, ಸಮುದಾಯ ಅರೋಗ್ಯ ಅಧಿಕಾರಿಗಳು, ತಾಲೂಕು ಆಸ್ಪತ್ರೆಯ 16 ಸಿಬ್ಬಂದಿಗಳು, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ 1 ಸಿಬ್ಬಂದಿ ಮತ್ತು ಯನ್.ಎಚ್.ಯಂ ಒಳಗುತ್ತಿಗೆ ಸಿಬ್ಬಂದಿಗಳು ಮಾ. 1ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಹೆಚ್ಚಿನ ಸಿಬ್ಬಂದಿಗಳು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ಕೈಗೊಂಡಿದ್ದಾರೆ. ಬೆಂಗಳೂರಿಗೆ ತೆರಳಲು ಅನಾನುಕೂಲವಾದ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರಕ್ಕೆ ಬೆಂಬಲ ಸೂಚಿಸಿರುವುದಾಗಿ ತಿಳಿದುಬಂದಿದೆ.