ಅಲೆಕ್ಕಾಡಿ : ಶ್ರೀಮತಿ ಜಾನಕಿ ಸಾಲ್ಯಾನ್ ರವರ ಶ್ರದ್ಧಾಂಜಲಿ ಸಭೆ

0

ಎಡಮಂಗಲ ಗ್ರಾಮದ ಅಲೆಕ್ಕಾಡಿ ಶ್ರೀಮತಿ ಜಾನಕಿ ಸಾಲ್ಯಾನ್ ರವರು ಇತ್ತೀಚಿಗೆ ನಿಧನ ಹೊಂದಿದ್ದು, ಅವರ ಸದ್ಗತಿ ಕಾರ್ಯಕ್ರಮ ಮತ್ತು ಶ್ರದ್ಧಾಂಜಲಿ ಸಭೆಯು ಮಾರ್ಚ್ 6ರಂದು ಅಲೆಕ್ಕಾಡಿ ಮನೆಯಲ್ಲಿ ಆಚರಿಸಲಾಯಿತು.

ಎನ್‌.ಜಿ. ಲೋಕನಾಥ ರೈಯವರು ನುಡಿ ನಮನಗೈದು, ಪುಷ್ಪ ನಮನ ಸಲ್ಲಿಸಿದರು. ಮೃತರ ಸಹೋದರ ವೆಂಕಪ್ಪ ಸಾಲ್ಯಾನ್ ಮತ್ತು ಕುಟುಂಬಸ್ಥರು ಹಾಗೂ ಊರಿನ ಹಲವು ಪ್ರಮುಖರು ಉಪಸ್ಥಿತರಿದ್ದರು.