ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಬಳ್ಪ ಶಾಲೆಗೆ ಸಿಸಿ ಕ್ಯಾಮರಾ ಕೊಡುಗೆ

0


ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ಜಂಟಿಯಾಗಿ ಬಳ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ರೂ. 40,000 ಮೌಲ್ಯದ ಸಿಸಿ ಕ್ಯಾಮೆರಾ ಸೆಟ್ ಅನ್ನು ಮಾ.6 ರಂದು ಕೊಡುಗೆಯಾಗಿ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಗೋಪಾಲ್ ಎಣ್ಣೆಮಜಲು ವಹಿಸಿದ್ದರು. ಸಮಾರಂಭವನ್ನು ರೋಟರಿ ಜಿಲ್ಲೆ ವಲಯ 4 ರ ಅಸಿಸ್ಟೆಂಟ್ ಗವರ್ನರ್ ಪಿ. ಎಚ್. ಎಫ್. ಮೇಜರ್ ಜನರಲ್ ಎಂ. ವಿ. ಭಟ್ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಮನೋರಮ ಭಟ್, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೆಕಲ್, ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಕಲಾ ಚೂಂತಾರು, ಉಪಾಧ್ಯಕ್ಷೆ ನೇತ್ರಾವತಿ ಹೋಪ್ಪಾಳೆ, ಕಡಬ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ರಾಮಕೃಷ್ಣ ಮಲ್ಲಾರ, ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಉಮೇಶ ಬುಡಂಗಿ, ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ, ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಡಾl ರವಿ ಕಕ್ಕೆ ಪದವು ಬೆಳ್ತಂಗಡಿ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ರಕ್ಷಿತ್ ರಗ್ನಿಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭ ಸಿಸಿ ಕ್ಯಾಮೆರಾ ಕೊಡುಗೆ ನೀಡಿದ ಬೆಳ್ತಂಗಡಿ ಅಸಿಸ್ಟೆಂಟ್ ಗವರ್ನರ್ ಮೇಜರ್ ಜನರಲ್ ಎಂ.ವಿ ಭಟ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರು ಮನೋರಮ್ಮ ಭಟ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆಮಜಲ್, ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೆಕಲ್ಲು, ಅವರುಗಳನ್ನು ಗೌರವಿಸಲಾಯಿತು. ಸುಬ್ರಮಣ್ಯ ರೋಟ್ರಿ ಕ್ಲಬ್ಬಿನ ಹಿರಿಯ ಸದಸ್ಯ ಸುದರ್ಶನ ಶೆಟ್ಟಿ, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಕೋಡಿಬೈಲ್, ಲೋಕೇಶ್ ಎಣ್ಣೆಮಜಲ್, ನಿಯೋಜಿತ ಕಾರ್ಯದರ್ಶಿ ಮೋಹನ್ ದಾಸ್ ಎಣ್ಣೆ ಮೆಜಲ್, ಲೊಕೇಶ್ ಎಣ್ಣೆಮಜಲು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಆನಂದ ವೈ ವಂದಿಸಿದರು.