ಸುಳ್ಯ ಪಯಸ್ವಿನಿ ಜೇಸಿಐ ವತಿಯಿಂದ ಮಂಡೆಕೋಲಿನಲ್ಲಿ ಮಹಿಳಾ ದಿನಾಚರಣೆ

0

ಜೇಸಿಐ ಸುಳ್ಯ ಪಯಸ್ವಿನಿ (ರಿ.)ಸುಳ್ಯ ಇದರ ವತಿಯಿಂದ ಮಂಡೆಕೋಲು ಸಹಕಾರಿ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ನವೋದಯ ಸ್ವ ಸಹಾಯ ಸಂಘಗಳ ಒಕ್ಕೂಟ ಮಂಡೆಕೋಲು ಇದರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಯಸ್ವಿನಿ ಘಟಕ ದ ಅಧ್ಯಕ್ಷ ನವೀನಕುಮಾರ್ ಕೂಕುಲುಮಜಲು ವಹಿಸಿದ್ದರು. ವೇದಿಕೆಯಲ್ಲಿ ಜೇಸಿಐ ಭಾರತ ವಲಯ 15 ರ ಪೂರ್ವಧ್ಯಕ್ಷ ಅಶೋಕ್ ಚೂoತಾರ್, ವಲಯಧಿಕಾರಿ ಗುರುರಾಜ್ ಅಜ್ಜಾವರ, ಮಂಡೆಕೋಲು ಕೃಷಿ ಪತ್ತಿನ ಸಹಕಾರಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಾನಾಧಿಕಾರಿ ಉದಯಕುಮಾರ್, ಒಕ್ಕೂಟ ದ ಪ್ರೇರಕಿ ಸಂದ್ಯಾ, ಒಕ್ಕೂಟದ ಗೌರವಧ್ಯಕ್ಷೆ ತುಳಸಿನಿ ದೇವರಗುಂಡ, ಒಕ್ಕೂಟದ ಕಾರ್ಯದರ್ಶಿ ಜಯಶ್ರೀ, ಕಾರ್ಯಕ್ರಮ ಸಂಯೋಜಕಿ ಶಶ್ಮಿ ಭಟ್ ಹಾಗೂ ಸುರೇಶ್ ಕಾಮತ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡಲಾಯಿತು.