ದೇವಚಳ್ಳ ಶಾಲೆಯಲ್ಲಿ ವಿಜ್ಞಾನ ಮೇಳ

0

ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮೇಳವು ಮಾ.11ರಂದು ನಡೆಯಿತು‌.


ವಿಜ್ಞಾನ ಮೇಳವನ್ನು ದೇವಚಳ್ಳ ಪಂಚಾಯತ್ ಸದಸ್ಯರಾದ ಪ್ರೇಮಲತಾ ಕೇರ ಮತ್ತು ಮೆಟ್ರಿಕ್ ಮೇಳವನ್ನು ಡಾ.ಚೈತ್ರ ಭಾನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಜಯಪ್ರಕಾಶ್ ಕೆ, ದೇವಚಳ್ಳ ಕ್ಲಸ್ಟರ್ ನ ಸಿಆರ್ ಪಿ ಸಂತೋಷ, ಎಲಿಮಲೆ ಪ್ರೌಢ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಹರ್ಲಡ್ಕ ಹಾಗೂ ಎಸ್ ಡಿಎಂಸಿ ಯ ಎಲ್ಲಾ ಸದಸ್ಯರು, ಪೋಷಕರು, ವಿದ್ಯಾಭಿಮಾನಿಗಳು ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.

ವಿದ್ಯಾರ್ಥಿಗಳು ವಿವಿಧ ಬಗೆಯ ತರಕಾರಿಗಳು, ತಿಂಡಿನಿಸುಗಳು, ಪಾನಿಯಗಳು, ಗೃಹಪಯೋಗಿ ವಸ್ತುಗಳು, ಬಟ್ಟೆ ಮುಂತಾದುವುಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು.