ಕಾವಿನಮೂಲೆ ಪಾಟಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಯುವಶಕ್ತಿಯ ಶ್ರಮ ದೇಶದ ಅಭಿವೃದ್ಧಿಗೆ ಕೈಗನ್ನಡಿ : ಸಚಿವ ಎಸ್.ಅಂಗಾರ

ಸುಮಾರು 50 ಲಕ್ಷ ಸಚಿವರ ಅನುದಾನ ಮತ್ತು 1ಲಕ್ಷ ಗ್ರಾಮ ಪಂಚಾಯತ್ ಅನುದಾನದಿಂದ ಕಾವಿನಮೂಲೆ ಪಾಟಾಜೆ ರಸ್ತೆ ಕಾಂಕ್ರಿಟ್ ಕರಣಗೊಂಡಿದ್ದು ರಸ್ತೆಯ ಲೋಕಾರ್ಪಣೆ ಮತ್ತು ಧನ್ಯತಾ ಸಮಾರಂಭವು ಕಾವಿನಮೂಲೆ ನಂದನ ಫಾರ್ಮ್ ನಲ್ಲಿ ಮಾ.13 ರಂದು ನಡೆಯಿತು.


ಲೋಕಾರ್ಪಣೆ ಗೊಳಿಸಿ , ಧನ್ಯತಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಸರಕಾರವು ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಗೆ ಹೆಚ್ಚಿನ ಒತ್ತು ನೀಡಿ ಸಮಗ್ರ ಅಭಿವೃದ್ಧಿಗೆ ಸರ್ವ ರೀತಿಯಲ್ಲೂ ಶ್ರಮಿಸುತ್ತಿದೆ. ಸರಕಾರದ ಜೊತೆ ಅದರ ಫಲಾನುಭವಿಗಳು ಕೈ ಜೋಡಿಸಿದಾಗ ನಡೆದ ಕಾಮಗಾರಿ ಗಳು ಉತ್ತಮವಾಗಿರಲು ಸಾಧ್ಯ, ಜೊತೆಗೆ ಯುವಶಕ್ತಿ ಹೆಚ್ಚಿನ ನಾಯಕತ್ವ ವಹಿಸಿ ಕೊಂಡು ಶ್ರಮ ವಹಿಸಿದಾಗ ಅದರ ಮೌಲ್ಯ ಉತ್ತಮವಾಗಿದ್ದು, ಅದರ ಪ್ರಯೋಜನ ಮುಂದಿನ ಪೀಳಿಗೆಯವರೆಗೂ ಉಳಿಯಲು ಸಾಧ್ಯ, ಇದರೊಂದಿಗೆ ಸಮಗ್ರ ಧೇಶದ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಹೇಳಿದರು. ಸಚಿವರಿಗೆ ಮತ್ತು ವಿಶೇಷವಾಗಿ ಕಾಮಗಾರಿಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ಸಭಾದ್ಯಕ್ಷತೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ವಹಿಸಿದ್ದರು. ವೇದಿಕೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು, ವಾರ್ಡ್ ಸದಸ್ಯರಾದ ಶ್ರೀ ಅನಿಲ್ ರೈ ಚಾವಡಿಬಾಗಿಲು,ಬಿಜೆಪಿ ಮುಖಂಡರಾದ ವೆಂಕಟ್ ವಳಲಂಬೆ,ಕಾವಿನಮೂಲೆ ಭಾಗದ ಹಿರಿಯ ಸಾಮಾಜಿಕ ಧುರೀಣರಾದ ಚಿದಾನಂದ ರಾವ್ ಪಾಟಾಜೆ, ಹಿರಿಯ ಪ್ರಗತಿಪರ ಕ್ರಷಿಕರು ವೆಂಕಟರಮಣ ಭಟ್ ಕಾವಿನಮೂಲೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಿರಿಯ ಇಂಜಿನಿಯರು ಮಣಿಕಂಠ, ಮುಖ್ಯ ಅತಿಥಿಗಳಾಗಿ ಗ್ರಾಮ ಸ್ವರಾಜ್ಯ ತಂಡದ ಅಧ್ಯಕ್ಷರಾದ ಆರ್ ಕೆ ಭಟ್ ಕುರುಂಬುಡೇಲು ಭಾಗವಹಿಸಿದ್ದರು,ಶ್ರೀ ರಾಂ ಪಾಟಾಜೆ ಯವರು ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಸುಧಾಕರ ನೆಟ್ಟಾರು ಧನ್ಯವಾದ ಸಮರ್ಪಿಸಿ ಸಾಗರ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.