ಸಚಿವ ಎಸ್ ಅಂಗಾರರಿಂದ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಟ್ರಸ್ಟಿಗೆ ರೂ 10 ಲಕ್ಷಗಳ ಅನುದಾನ ಘೋಷಣೆ

0

ಮಾರ್ಚ್ 14ರಂದು ಶ್ರೀ ಕ್ಷೇತ್ರ ‘ಕಂದ್ರಪ್ಪಾಡಿಯಲ್ಲಿ ನಡೆದ ಜಾತ್ರೋತ್ಸವದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕಾ ಮತ್ತು ಬಂದರು ಸಚಿವ ಎಸ್ ಅಂಗಾರ ಮಾತನಾಡುತ್ತಾ ಸ್ಥಳೀಯ ಸಂಸ್ಥೆಯಾದ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದಕ್ಕೆ 10 ಲಕ್ಷ ರೂಗಳನ್ನು ಅನುದಾನವಾಗಿ ನೀಡುವುದಾಗಿ ಘೋಷಣೆ ಮಾಡಿದರು.

ಈ ಅನುದಾನವನ್ನು ಸಂಸ್ಥೆಯ ಕಚೇರಿ ನಿರ್ಮಾಣಕ್ಕೆ ಮತ್ತು ರಂಗ ಮಂದಿರ ನಿರ್ಮಾಣ ಮಾಡಲು ನೀಡುವುದಾಗಿ ಹೇಳಿದರು ಮೊದಲ ಹಂತವಾಗಿ 5 ಲಕ್ಷ ರೂಗಳನ್ನು ಮಂಜೂರು ಮಾಡುವುದಾಗಿಯೂ ಮುಂದಿನ ದಿನಗಳಲ್ಲಿ ಉಳಿದ 5 ಲಕ್ಷಗಳನ್ನು ಹಂತ ಹಂತವಾಗಿ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎ.ವಿ ತೀರ್ಥರಾಮ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ದೇವಚಳ್ಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸುಲೋಚನಾ ದೇವ, ಶ್ರೀ ಕ್ಷೇತ್ರ ಕಂದ್ರಪ್ಪಾಡಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಜಲಶ್ರೀ ಪ್ರತಿಷ್ಠಾನ ಕಡ್ಲಾರು ಎಂಬ ಸಂಸ್ಥೆಯು ಸಾಹಿತ್ಯ ಸಾಂಸ್ಕೃತಿಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿದ್ದು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ.
ಈ ಅನುದಾನದ ಘೋಷಣೆ ಮಾಡಿಸುವಲ್ಲಿ ವೆಂಕಟ್ ವಳಲಂಬೆ ಇವರು ಸಹಕರಿಸಿದ್ದಾರೆ.