ಕೊರತ್ತೋಡಿ – ಬೊಳ್ಳಾಜೆ ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊರತ್ತೋಡಿ – ಬೊಳ್ಳಾಜೆ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕ್ರಮವು ಇಂದು ನಡೆಯಿತು.

ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ ಎ.ವಿ. ದೀಪ ಬೆಳಗಿಸಿದರು. ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷೆ ಗುದ್ದಲಿಪೂಜೆ ನೆರವೇರಿಸಿದರು. ಉಪಾಧ್ಯಕ್ಷ ಧನಂಜಯ ಕುಮಾರ್ ತೆಂಗಿನ ಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳಾದ ವೇಣುಗೋಪಾಲ ತುಂಬೆತ್ತಡ್ಕ, ವನಿತಾ ಬೊಳ್ಳಾಜೆ, ಭಾಗೀರಥಿ ಎರ್ಮೆಟ್ಟಿ, ವನಿತಾ ಬೊಳ್ಳಾಜೆ, ಕಾಂಟ್ರಾಕ್ಟರ್ ಹರಿಪ್ರಸಾದ್ ಬಿ.ವಿ., ಬೊಳ್ಳಾಜೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಬೊಳ್ಳಾಜೆ, ಮಾಜಿ ಅಧ್ಯಕ್ಷ ಗಂಗಾಧರ ಬೊಳ್ಳಾಜೆ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸೇವಾನಿರತೆ ಜ್ಯೋತಿ ಕೊರತ್ತೋಡಿ, ನಿವೃತ್ತ ಅಂಚೆ ಪ್ರಧಾನ ಅಂಚೆ ವಿತರಕ ಬಾಲು ನಾಯ್ಕ ಕೊರತ್ತೋಡಿ, ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಮೋನಪ್ಪ ಪೂಜಾರಿ ಹೈದಂಗೂರು, ಸ್ಥಳೀಯರಾದ ಸುಬ್ರಹ್ಮಣ್ಯ ನಾಯಕ್‌ ಬೊಳ್ಳಾಜೆ, ಗಂಗಾಧರ ಕೊರತ್ತೋಡಿ, ಕೊರಗಪ್ಪ ಮತ್ತಿರರು ಉಪಸ್ಥಿತರಿದ್ದರು.