
ಮಾರ್ಚ್ 18ರಂದು ಸುಳ್ಯದಲ್ಲಿ ಬೆಳ್ಳಂಬೆಳಗ್ಗೆ ಕುರುಂಜಿ ಗುಡ್ಡೆ ಪರಿಸರದಿಂದ ಸುಳ್ಯ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧನ ಕ್ಕೊಳಗಾಗಿದ್ದ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಆರೋಪಿ ಕಬೀರ್ ಎಸ್ ಎ (36) ಎಂದು ತಿಳಿದುಬಂದಿದೆ. ಈತ ಸುಳ್ಯ ನಗರದ ಬೆಟ್ಟಂಬಾಡಿ ನಿವಾಸಿ ದಿ. ಅಬೂಬಕ್ಕರ್ ಎಂಬವರ ಮಗ ಎಂದು ತಿಳಿದು ಬಂದಿದೆ.
ಆರೋಪಿಯಿಂದ ವಶಪಡಿಸಿಕೊಂಡ ಮಾದಕ ವಸ್ತು MDMA ಆಗಿದ್ದು 44.ಗ್ರಾಂ ತೂಕವುಳ್ಳ ಇದರ ಬೆಲೆ ರೂ. 1,32,000 ಎಂದು ಅಂದಾಜಿಸಲಾಗಿದೆ ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ. ಇದರೊಂದಿಗೆ ಆರೋಪಿಯಿಂದ 2 ಮೊಬೈಲ್ ಫೋನ್ ಗಳು ಒಂದು ಕಾರು,ಒಂದು ತೂಕ ಮಾಪಕವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈತನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.