ಪಂಜ: ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟನೆ, ಕ್ರೀಡೆಗಳಲ್ಲಿ ಯಶಸ್ವಿ ಕಾಣಲುಉತ್ತಮ ತರಬೇತಿ ಅಗತ್ಯ: ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ

0

ಪಂಚಶ್ರೀ ಶಟಲ್ ಕ್ಲಬ್ ಪಂಜ ಇದರ ವತಿಯಿಂದ ಪುರುಷರ ಮುಕ್ತ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಮಾ.18 ರಂದು ಸಂಜೆ ಪಂಜ ಉತ್ಕೃರ್ಷ ಸಹಕಾರ ಸೌಧದ ವಠಾರದಲ್ಲಿ ಉದ್ಘಾಟನೆ ಗೊಂಡಿತು.

ಹಿರಿಯ ಶಟಲ್ ಆಟಗಾರ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ”ಕ್ರೀಡೆಗಳಲ್ಲಿ ಯಶಸ್ವಿಯಾಗಿ ಮುನ್ನಡೆಯಲು, ಉತ್ತಮ ತರಬೇತುದಾರರಿಂದ ತರಬೇತಿ ಪಡೆಯ ಬೇಕು. ಶೈಕ್ಷಣಿಕ ಜೊತೆಗೆ ಕ್ರೀಡೆಯನ್ನು ಮೈಗೂಡಿಸಿಕೊಂಡಾಗಉತ್ತಮ ದೈಹಿಕ ಮಾನಸಿಕ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ.”ಎಂದು ಹೇಳಿದರು.

ಸಭಾಧ್ಯಕ್ಷತೆನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ ಏನೆಕಲ್ಲು,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಪಂಚಶ್ರೀ ಶಟಲ್ ಕ್ಲಬ್ನ ಅಧ್ಯಕ್ಷ ಅಶ್ವಥ್ ರೈ ಕೆಬ್ಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಜಯಶ್ರೀ ಪಲ್ಲೋಡಿ ಪ್ರಾರ್ಥಿಸಿದರು. ಅಶ್ವಥ್ ರೈ ಕೆಬ್ಲಾಡಿ ಸ್ವಾಗತಿಸಿದರು.ಸೋಮಶೇಖರ ನೇರಳ ನಿರೂಪಿಸಿದರು. ನಾಗಮಣಿ ಕೆದಿಲ ವಂದಿಸಿದರು.