ಬೆಳ್ಳಾರೆ: ಸ್ನೇಹಶ್ರೀ ಮಹಿಳಾ ಮಂಡಲ, ಗ್ರಾ.ಪಂ. ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

0


ಬೆಳ್ಳಾರೆಯ ಸ್ನೇಹಶ್ರೀ ಮಹಿಳಾ ಮಂಡಲ ಮತ್ತು ಗ್ರಾ.ಪಂ. ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮಾ. 20ರಂದು ಬೆಳ್ಳಾರೆಯ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.


ಬೆಳ್ಳಾರೆ ಗ್ರಾ. ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಕೋರಿದರು. ಸಭಾಧ್ಯಕ್ಷತೆಯನ್ನು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆಯ ಅಧ್ಯಕ್ಷೆ ಕುಸುಮ ಕುರುಂಬುಡೇಲು ವಹಿಸಿದ್ದರು.

ಸ್ವಉದ್ಯೋಗ ಮತ್ತು ಮಹಿಳೆ ವಿಷಯದ ಬಗ್ಗೆ ಶ್ವೇತಾ ರಾಜೇಶ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಎನ್ ಆರ್ ಎಲ್ ಎಂ ತಾಲೂಕು ಪಂಚಾಯತ್ ಸುಳ್ಯ ಇವರು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ.ಆರ್, ವಲಯ ಮೇಲ್ವಿಚಾರಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಳ್ಯ ಇದರ ಮೇಲ್ವಿಚಾರಕಿ ಉಷಾ ಪ್ರಸಾದ್ ರೈ, ಧನಲಕ್ಷ್ಮಿ ಸ್ತ್ರೀಶಕ್ತಿ ಗೊಂಚಲು ಸಮಿತಿ ಬೆಳ್ಳಾರೆ ವಲಯದ ಅಧ್ಯಕ್ಷೆ ವೀಣಾ ಪೆರುವಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಮಹಿಳಾ ಮಂಡಲದ ಸದಸ್ಯರಿಗೆ ಏರ್ಪಡಿಸಿದ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇಂದಿರಾ ಅಜಪಿಲ ಪ್ರಾರ್ಥಿಸಿ, ಭಾರತಿ ಕೊಳಂಬಳ ಸ್ವಾಗತಿಸಿ, ಕಾರ್ಯದರ್ಶಿ ಸೌಮ್ಯ ಮೂಡಾಯಿತೋಟ ವಂದಿಸಿ, ಪೂರ್ವಾಧ್ಯಕ್ಷೆ ಪೂರ್ಣಿಮಾ ಪಡ್ಪು ಕಾರ್ಯಕ್ರಮ ನಿರೂಪಿಸಿದರು.