ಗುತ್ತಿಗಾರು ವರ್ತಕರ ಸಂಘದ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ

0

ಗುತ್ತಿಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ತಕರ ಸಂಘ ಗುತ್ತಿಗಾರು ಇದರ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಗುತ್ತಿಗಾರಿನ ಪರಿಶಿಷ್ಟ ಪಂಗಡ ಸಭಾಭವನದಲ್ಲಿ ಇಂದು ನಡೆಯಿತು.

ಸಭಾಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ. ವಹಿಸಿದ್ದರು. ಈ ಸಂದರ್ಭದಲ್ಲಿ ವರ್ತಕರ ಸಂಘದ ಪದಾಧಿಕಾರಿಗಳ ಮಕ್ಕಳು ಹಾಗೂ ಮನೆಯವರುವಿವಿಧ ಕ್ಷೇತ್ರಗಳಲ್ಲಿ. ಸಾಧನೆ ಮಾಡಿದವರನು. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಾಲು ಹೊದಿಸಿ. ಹಾರ ಹಾಕಿ ಸ್ಮರಣಿಕೆ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದನಪತಿ ಅವರು ಉಪಸ್ಥಿತರಿದ್ದು ಮಾತನಾಡುತ್ತ ವರ್ತಕರೆಲ್ಲರೂ ತಮ್ಮ ತಮ್ಮ ಅಂಗಡಿಗಳಲ್ಲಿ ಬಟ್ಟೆ ಚೀಲಗಳನ್ನು ಬಳಸುವುದರ ಮುಖಾಂತರ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕೆಂದು ವಿನಂತಿಸಿಕೊಂಡರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಲಿಜೋ ಜೋಸ್, ಕಾರ್ಯದರ್ಶಿ ರವಿಪ್ರಕಾಶ್ ಬಿ.ವಿ., ಜೊತೆ ಕಾರ್ಯದರ್ಶಿ ರಾಜೇಶ್ ಬಾಕಿಲ, ಕೋಶಾಧಿಕಾರಿ ದಿನೇಶ್ ಹಾಲೆಮಜಲು ಉಪಸಿತರಿದ್ದರು. ನಿಕಟಪೂರ್ವ ಅಧ್ಯಕ್ಷ ವೆಂಕಟರಮಣ ಕೆಂಬ್ರೊಳಿ ಕಾರ್ಯಕ್ರಮ ನಿರೂಪಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರ ಸಂಘದ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here