ಐವರ್ನಾಡು : ಚಲ್ಲತ್ತಡಿ ಎಂಬಲ್ಲಿ ಸೇತುವೆ ನಿರ್ಮಾಣವಾಗದ ಹಿನ್ನಲೆ

0

35 ವರ್ಷದ ಬೇಡಿಕೆಗೆ ಸ್ಪಂದಿಸದ ಜನಪ್ರತಿನಿಧಿಗಳು, ಸರಕಾರ

ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಬ್ಯಾನರ್

ಐವರ್ನಾಡು ಗ್ರಾಮದ ದೇವರಕಾನ ಸಮೀಪ ಹಲವು ವರ್ಷಗಳ ಬೇಡಿಕೆಯಾದ ಚಲ್ಲತ್ತಡಿ ಎಂಬಲ್ಲಿ ಹೊಳೆಗೆ ಸೇತುವೆ ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವುದಾಗಿ ತಿಳಿದು ಬಂದಿದೆ.


ಬ್ಯಾನರ್ ನಲ್ಲಿ ಐವರ್ನಾಡು ಗ್ರಾಮದ ಬಿರ್ಮುಕಜೆ,ಚಲ್ಲತ್ತಡಿ,ಸಾರಕರೆಗೆ ಹಾದುಹೋಗುವ ರಸ್ತೆಯಲ್ಲಿರುವ ಚಲ್ಲತ್ತಡಿ ಎಂಬಲ್ಲಿ ಹೊಳೆಗೆ ಸೇತುವೆ ನಿರ್ಮಿಸುವ ಬಗ್ಗೆ ಕಳೆದ 35 ವರ್ಷಗಳಿಂದ ಸಾಕಷ್ಟು ಬೇಡಿಕೊಳ್ಳುತ್ತಿದ್ದರೂ ಯಾವುದೇ ಸ್ಪಂದನೆ ಸಿಗದೆ, ಊರಿನ ಜನರ ಸಂಕಷ್ಟ ಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುವ ರಾಜಕೀಯ ನಾಯಕರ ಹಾಗೂ ಸರಕಾರದ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಚುನಾವಣೆ ಬಹಿಷ್ಕರಿಸುವುದಾಗಿ ಶಪಥಗೈದಿದ್ದೇವೆ ಎಂದು ಬ್ಯಾನರ್ ಅಳವಡಿಸಿದ್ದಾರೆ.


ಸಚಿವರಿಗೆ,ಜಿಲ್ಲಾಧಿಕಾರಿಯವರಿಗೆ ಮನವಿ


ಸೇತುವೆ ನಿರ್ಮಾಣವಾಗಬೇಕೆಂದು ಸುಳ್ಯ ಶಾಸಕರು ಹಾಗೂ ಸಚಿವರಾದ ಎಸ್.ಅಂಗಾರರವರಿಗೆ,ಉಸ್ತುವಾರಿ ಸಚಿವ ಸುನಿಲ್‌ಕುಮಾರ್,ತಹಶೀಲ್ದಾರ್,ಜಿಲ್ಲಾಧಿಕಾರಿಗಳಿಗೆ ಕಳೆದ ವರ್ಷವೂ ದಿನಾಂಕ : 20-12-2022 ರಂದು ಸುಮಾರು 150 ಜನರ ಸಹಿ ಮಾಡಿ ಮನವಿ ಸಲ್ಲಿಸಿದ್ದರು.
ಆದರೆ ಹಲವು ವರ್ಷಗಳ ಬೇಡಿಕೆಗೆ ಯಾವುದೇ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮದ ಒಂದು ಭಾಗದ ಎಲ್ಲಾ ಮನೆಯವರು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಈ ರಸ್ತೆ ಪೆರ್ಲಂಪಾಡಿ, ಕೊಳ್ತಿಗೆ,ನೆಟ್ಟಾರು ಪುತ್ತೂರನ್ನು ಅತೀ ಹತ್ತಿರದಲ್ಲಿ ಸಂಪರ್ಕಿಸುವ ರಸ್ತೆಯಾಗಿದೆ.