ನಾಳೆ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0


ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಮತ್ತು ಪ್ರತಿಷ್ಠೆ ಇಂದು ನಾಳೆ ನಡೆಯಲಿದೆ. ಇಂದು ಸಂಜೆ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.
ಮಾ. 31ರಂದು ಬೆಳಿಗ್ಗೆ ಗಂಟೆ 7.00ರಿಂದ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷಾ ಬಲಿ, ಕಲಶ ಪೂಜೆ, ಬೆಳಿಗ್ಗೆ 10.26ರಿಂದ 11.07ರ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ನಾಗಪ್ರತಿಷ್ಠೆ ಮತ್ತು ಗುಳಿಗ ದೈವದ ಪ್ರತಿಷ್ಠೆ, ಪಂಚಾಮೃತ ಅಭಿಷೇಕ, ತಂಬಿಲ ಸೇವೆ ನಡೆಯಲಿದೆ. ಪೂ. 7.00ರಿಂದ ದೇಗುಲದಲ್ಲಿ ಗಣಪತಿ ಹೋಮ, ನಾಗದೇವರಿಗೆ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8.30ರಿಂದ ಶ್ರೀ ದೇವರಿಗೆ ರಂಗಪೂಜೆ, ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ 5.00 ರಿಂದ 7.00 ರ ತನಕ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.