ಕೂಜುಗೋಡು ಕಟ್ಟೆಮನೆ ತರವಾಡಿನ ವತಿಯಿಂದ ಡಾ. ರವಿಕಕ್ಕೆಪದವುರವರಿಗೆ ಸನ್ಮಾನ

0

ಕೂಜುಗೋಡು ಕಟ್ಟೆಮನೆ ತರವಾಡಿನಲ್ಲಿ ಜೀರ್ಣೋದ್ದಾರದ ಉಪಕಟ್ಟಡ ಕಾಮಗಾರಿಗೆ ಸಹಕಾರ ನೀಡಿರುವುದಕ್ಕಾಗಿ ಕೂಜುಗೋಡು ಕಟ್ಟೆಮನೆ ತರವಾಡು ಟ್ರಸ್ಟಿನ ವತಿಯಿಂದ ಡಾ. ರವಿಕಕ್ಕೆಪದವುರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಡಾ. ಪುರುಷೋತ್ತಮ ಕೂಜುಗೋಡು ಕಟ್ಟೆಮನೆ, ಪೋಷಕಾಧ್ಯಕ್ಷರಾದ ಸುಧೀರ್ ಕೆ.ವಿ. ಪ್ರಧಾನ ಕಾರ್ಯದರ್ಶಿ ಡಾ. ಸೋಮಶೇಖರ್ ಕೆ. ಎಲ್, ನಿರ್ದೇಶಕರಾದ ಜಯರಾಮ ಕೆ. ಕೆ., ರಾಧಾಕೃಷ್ಣ ಕಟ್ಟೆಮನೆ, ಪ್ರಮೋದ್ ಕಟ್ಟೆಮನೆ ಹಾಗು ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರು ಉಪಸ್ಥಿತರಿದ್ದರು.