ಕುಡಿಯುವ ನೀರಿಗಾಗಿ ಸೂರೆಂಗಿ – ಕುಳ್ಳಾಜೆಯವರಿಂದ ಮತದಾನ ಬಹಿಷ್ಕಾರ

0

ಅಮರಮೂಡ್ನೂರು ಗ್ರಾಂ.ಪಂ ವ್ಯಾಪ್ತಿಯ ಅಮರ ಪಡ್ನೂರು ಗ್ರಾಮದ ಸೂರೆಂಗಿ ಕುಳ್ಳಾಜೆ ಭಾಗದ ನಾಗರಿಕರು ಕುಡಿಯುವ ನೀರಿನ ಬೇಡಿಕೆ ಮುಂದಿರಿಸಿ ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದಾರೆ.


ಈ ಬಗ್ಗೆ ಶೇಣಿಯ ಜಂಕ್ಷನ್ ನಲ್ಲಿ ಮತ್ತು ಸೂರೆಂಗಿ ಭಾಗ ಕಡೆ ಹೋಗುವಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ. ನಮ್ಮನ್ನು ಸಂಪೂರ್ಣ ನಿರ್ಲಕ್ಷ ಮಾಡಿದ್ದು ಯಾವುದೇ ಮೂಲಭೂತ ಸೌಕರ್ಯವನ್ನು ಒದಗಿಸಿರುವುದಿಲ್ಲ. ಅಲ್ಲದೆ ಇಲ್ಲಿನ ನೀರಿನ ಸಮಸ್ಯೆ ಶಾಶ್ವತವಾಗಿದ್ದು ತಕ್ಷಣ ನೀರಿನ ವ್ಯವಸ್ಥೆ ಸರಿಪಡಿಸಬೇಕು. ಅಧಿಕಾರಿಗಳ ಜನಪ್ರತಿನಿಧಿಗಳ ಟೊಳ್ಳು ಭರವಸೆಯನ್ನು, ಆಶ್ವಾಸನೆಯನ್ನು ನಂಬಿ ನಮ್ಮ ಕೆಲಸ ಆಗದೆ ಬೇಸರಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿದೆ ಬ್ಯಾನರ್ ನಲ್ಲಿ ಬರೆಯಲಾಗಿದೆ.