ಪಂಜ ಲಯನ್ಸ್ ಕ್ಲಬ್ ನಿವೇಶನದ ಸ್ಥಳದಾನಿ ಚಿದಾನಂದ ಬಿಳಿಮಲೆ ನಿಧನ

0

ಪಂಜ ಲಯನ್ಸ್ ಕ್ಲಬ್ ಸದಸ್ಯ,ಪಂಜ ಲಯನ್ಸ್ ಕ್ಲಬ್ ನಿವೇಶನದ ಸ್ಥಳ ದಾನಿ ಬಿಳಿಮಲೆ ಚಿದಾನಂದ ರವರು ಅಲ್ಪ ಕಾಲದ ಅಸೌಖ್ಯದಿಂದ ಎ.12 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.ಅವರಿಗೆ
65 ವರುಷ ವಯಸ್ಸಾಗಿತ್ತು.
ಅವರು ಉತ್ತಮ ಹೈನುಗಾರರು, ಪ್ರಗತಿಪರ ಕೃಷಿಕರಾಗಿದ್ದು,ಪಂಜ ಲಯನ್ಸ್ ಕ್ಲಬ್ ನ ಸಕ್ರೀಯ ಸದಸ್ಯನಾಗಿದ್ದು ಪಂಜ ಪೇಟೆಯಲ್ಲಿ ಲಯನ್ಸ್ ಕ್ಲಬ್ ಗೆ ನಿವೇಶನ ನಿರ್ಮಾಣಕ್ಕೆ ಸ್ಥಳದಾನ
ಮಾಡಿದ್ದರು.
ಮೃತರು ಪತ್ನಿ ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿ ಶ್ರೀಮತಿ ಯಶೋಧ ಬಿ ಸಿ, ಪುತ್ರ ಪ್ರಜ್ವಲ್ , ಪುತ್ರಿ ಶ್ರೀಮತಿ ಪ್ರಗತಿ ಗೌತಮ್, ಅಳಿಯ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.