ಸುಳ್ಯ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜ್: ಜೂ.10ರಂದು ವಿದ್ಯಾರ್ಥಿ ವೇತನಕ್ಕಾಗಿ ಆನ್ಲೈನ್ ಪರೀಕ್ಷೆ

0


ಕೆ.ವಿ.ಜಿ ಕಾಲೇಜ್ ಆಫ್ ಇಂಜಿನಿಯರಿಂಗ್ ಸುಳ್ಯ ಇದರ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾದ ಡಾ| ರೇಣುಕಾಪ್ರಸಾದ್‌ ಕೆ.ವಿ. ಯವರು ತಮ್ಮ ತಂದೆಯವರಾದ ಡಾ| ಕುರುಂಜಿ ವೆಂಕಟ್ರಮಣ ಗೌಡರ ಹೆಸರಿನಲ್ಲಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳ ಇಂಜಿನಿಯರಿಂಗ್‌ ಕಲಿಕೆಗೆ ಪ್ರತೀ ಶೈಕ್ಷಣಿಕ ವರ್ಷದಲ್ಲಿ ‘ಡಾ| ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿ ವೇತನ’ ನೀಡುವ ಸಲುವಾಗಿ ಆನ್‌ಲೈನ್‌ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.
ವಿದ್ಯಾರ್ಥಿವೇತನ ನೀಡುವ ಸಲುವಾಗಿ ಆನ್‌ಲೈನ್‌ ಮುಖಾಂತರ ಜೂ.10ರಂದು ನಡೆಸಲಾಗುವ ಈ ಪರೀಕ್ಷೆಗೆ, ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜೂ. 8ರ ಮೊದಲು www.kvgceexam.comಎಂಬ ಲಿಂಕನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಬಹುದು.
ಈ ಪರೀಕ್ಷೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳು ಕಾಲೇಜಿನ ಬೋಧನಾಶುಲ್ಕದಲ್ಲಿ ಶೇ. 100ರ ವರೆಗೆ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಪರೀಕ್ಷೆಯು ಬೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳ CET ಮಾದರಿಯ ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿದ್ದು ಕಾಲಾವಧಿಯು ಒಟ್ಟು 100ನಿಮಿಷಗಳಾಗಿರುತ್ತದೆ. ಒಂದು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅಥವಾ ಟಚ್ ಸ್ಕ್ರೀನ್ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ವ್ಯವಸ್ಥೆಯೊಂದಿಗೆ ನೊಂದಾಯಿತ ವಿದ್ಯಾರ್ಥಿಗಳು ಮನೆಯಿಂದಲೇ ಜೂ. 10ರಂದು ಪರೀಕ್ಷೆ ಬರೆಯಬಹುದಾಗಿದೆ. ನೋಂದಣಿ ಹಾಗು ಪರೀಕ್ಷಾಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳು ಇದಕ್ಕಾಗಿ ಯಾವುದೇ ಶುಲ್ಕಪಾವತಿಸಬೇಕಿಲ್ಲ.
ಈ ಆನ್‌ಲೈನ್‌ ಪರೀಕ್ಷೆಯ ತಂತ್ರಾಂಶವನ್ನು ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಧ್ಯಾನ್ ಮತ್ತು ಜೀವನ್, ಪ್ರಾದ್ಯಾಪಕರುಗಳ ಮಾರ್ಗದರ್ಶದೊಂದಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟೆಕ್ನಾಲಾಜಿಯನ್ನು ಬಳಸಿಕೊಂಡು ರೂಪಿಸಿರುತ್ತಾರೆ.ಕೆ.ವಿ.ಜಿ. ವಿದ್ಯಾರ್ಥಿವೇತನದ ಪರೀಕ್ಷೆಯಲ್ಲಿ ಸೂಕ್ತ, ಅರ್ಹತೆ ಪಡೆದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಚಿತ ಇಂಜಿನಿಯರಿಂಗ್‌ ಶಿಕ್ಷಣದ ವ್ಯಾಸಂಗಕ್ಕೆ ಇದೊಂದು ಸುವರ್ಣಾವಕಾಶ.
ಕೆ.ವಿ.ಜಿ. ಇಂಜಿನಿಯರಿಂಗ್‌ “ಕಾಲೇಜನಲ್ಲಿ ಟ್ರೈನಿಂಗ್‌ ಮತ್ತು ಪ್ಲೇಸ್‌ಮೆಂಟ್‌ ವಿಭಾಗವು ಅನುಭವೀ ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರುವ, ಪ್ರಸಿದ್ದ ಕಂಪೆನಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ತಂಡವನ್ನು ಹೊಂದಿದ್ದು; 2021-22ನೇ ಶೈಕ್ಷಣಿಕ ವರ್ಷದಲ್ಲಿ 242 ಉದ್ಯೋಗಗಳಿಗೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದ ಮಾರ್ಚ್ ತಿಂಗಳ ವರೆಗೆ ಈಗಾಗಲೇ 79 ಕಂಪೆನಿಗಳು ಭೇಟಿ ನೀಡಿದ್ದು 173 ಉದ್ಯೋಗಗಳಿಗೆ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಇನ್ನೂ ಅನೇಕ ಕಂಪೆನಿಗಳು ಭೇಟಿ ನೀಡಲಿವೆ. ತಮ್ಮ ಕಂಪೆನಿಗಳಿಗೆ ಉದ್ಯೋಗಿಗಳಾಗಿ ಆಯ್ಕೆ ಮಾಡಲು ಕೆ.ವಿ.ಜಿ. ಇಂಜಿನಿಯರಿಂಗ್‌ ಕಾಲೇಜಿನ ಕ್ಯಾಂಪಸ್‌ಗೆ IBM, Sasken, Infosys, Toyota, Wipro, Tessolve, Biju’s, TCS(TATA), L&T,Robosoft, SLK software, Tech Mahindra, Wipfliಮತ್ತು ಇನ್ನೂ ಹಲವಾರು ಪ್ರತಿಷ್ಠಿತ ಕಂಪೆನಿಗಳು ಭೇಟಿ ನೀಡಿ ಸಂದರ್ಶನಗಳನ್ನು ಆಯೋಜಿಸುತ್ತವೆ.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಮತ್ತು ಪ್ರಾಂಶುಪಾಲ ಡಾ. ಸುರೇಶ. ವಿ ಯವರ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿವೇತನ ಪರೀಕ್ಷೆಯ ಜವಾಬ್ದಾರಿಯನ್ನು ಪರೀಕ್ಷೆಯ ಸಂಯೋಜಕರಾದ ಡಾ. ಲೇಖಾ ಬಿ.ಎಂ, ಪಠ್ಯಕ್ರಮ ಸಂಯೋಜಕ ಡಾ. ಚಂದ್ರಶೇಖರ್.ಎ, ಪ್ರಚಾರ ಸಮಿತಿ ಅಧ್ಯಕ್ಷ ಡಾ. ಕುಸುಮಾಧರ. ಎಸ್ , ಡೀನ್ ಅಡ್ಮಿಷನ್ ಪ್ರೊ. ಬಾಲಪ್ರದೀಪ್.ಕೆ.ಎನ್, ತಂತ್ರಾಂಶ ಸಮಿತಿ ಸಂಯೋಜಕ ಪ್ರೊ. ವೆಂಕಟೇಶ್ ಯು.ಸಿ ಮತ್ತು ಸಂಸ್ಥೆಯ ಸಿಬ್ಬಂದಿಗಳು ವಹಿಸಿಕೊಂಡಿರುತ್ತಾರೆ.ಸ್ಕಾಲರ್‌ಶಿಪ್‌ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9019761755 ಅಥವಾ 9480161966 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.