ಶ್ರೀಮತಿ ಪ್ರೇಮಲತಾ ಚೂಂತಾರು ನಿಧನ

0


ಅಮರಪಡ್ನೂರು ಗ್ರಾಮದ ಚೂಂತಾರು ಸಿದ್ಧಿವಿನಾಯಕ ಭಟ್ ಚೂಂತಾರುರವರ ಪತ್ನಿ ಶ್ರೀಮತಿ ಪ್ರೇಮಲತಾ ಏ. 15ರಂದು ಹೃದಯಸ್ಥಂಬನದಿಂದಾಗಿ ನಿಧನರಾದರು ಇವರಿಗೆ 62 ವರ್ಷ ವಯಸ್ಸಾಗಿತ್ತು. ಮನೆಯ ಕೆಲಸಗಳನ್ನು ಮುಗಿಸಿ ನೆರೆಮನೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ಹೊರಡುತ್ತಿರುವಾಗ ಕುಸಿದುಬಿದ್ದರೆನ್ನಲಾಗಿದೆ. ತಕ್ಷಣ ಅವರನ್ನು ಬೆಳ್ಳಾರೆ ಖಾಸಗಿ ಕ್ಲೀನಿಕ್ ಗೆ ಕರೆತಂದು ಬಳಿಕ ಸುಳ್ಯ ಜ್ಯೋತಿ ಆಸ್ಪತ್ರೆಗೆ ಕರೆತಂದರಾದರೂ ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರೆಂದು ತಿಳಿದುಬಂದಿದೆ. ಮೃತರು ಪತಿ, ಪುತ್ರ ಕೃಷ್ಣಕಿಶೋರ್, ನಾಲ್ವರು ಸಹೋದರಿಯರು, ಓರ್ವ ಸಹೋದರ ಸೇರಿದಂತೆ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.