ದುಗ್ಗಲಡ್ಕ- ಕೊಡಿಯಾಲಬೈಲ್ ರಸ್ತೆಯಲ್ಲಿ ಪ್ರತ್ಯಕ್ಷವಾಗಿ ಚರ್ಚೆಗೆ ಗ್ರಾಸವಾದ ಮತದಾನ ಬಹಿಷ್ಕಾರದ ಸ್ಟಿಕ್ಕರ್

0


ಸುಳ್ಯ – ನೀರಬಿದಿರೆ- ಕೊಡಿಯಾಲಬೈಲ್ ರಸ್ತೆಯ ಅಲ್ಲಲ್ಲಿ ಮತದಾನ ಬಹಿಷ್ಕಾರದ ಕರಪತ್ರವು ಪ್ರತ್ಯಕ್ಷವಾಗಿರುವುದು ಹೋರಾಟ ಸಮಿತಿಯವರಿಗೆ ಆಶ್ಚರ್ಯ ಉಂಟುಮಾಡಿ ಚರ್ಚೆಗೆ ಕಾರಣವಾಗಿದೆ.
ಎ.15ರಂದು ರಾತ್ರಿ ರಸ್ತೆಯ ವಿದ್ಯುತ್ ಕಂಬ, ಮನೆಯ ಗೇಟ್ ,ಕಟ್ಟೆಗಳಿಗೆ ಮತದಾನ ಬಹಿಷ್ಕಾರದ ಕರಪತ್ರ ಅಂಟಿಸಲಾಗಿದೆ.
ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ನಿರಂತರ ಹೋರಾಟ ನಡೆಯುತ್ತಿದ್ದು,ನಾಗರಿಕರ ಸಭೆಯಲ್ಲಿ ಮತದಾನ ಬಹಿಷ್ಕಾರದ ಪ್ರಸ್ತಾಪವಾಗಿದ್ದರೂ ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ವೇಳೆಯಲ್ಲಿ ಕರಪತ್ರ ಅಂಟಿಸಿದವರು ಯಾರು ಎನ್ನುವ ಬಗ್ಗೆ ಜಿಜ್ಞಾಸೆ ಉಂಟಾಗಿದೆ. ರಸ್ತೆ ಹೋರಾಟ ಸಂಘಟನೆಯನ್ನು ಒಡೆಯಲು ಮಾಡುತ್ತಿರುವ ಕುತಂತ್ರ. ಪರಸ್ಪರ ಅನುಮಾನ ಪಡುವಂತೆ ಮಾಡುವ ತಂತ್ರ ಇದಾಗಿದೆ.ಹೀಗೆ ಹಾಕಿದ ವ್ಯಕ್ತಿಯನ್ನು ಪತ್ತೆ ಮಾಡುತ್ತೇವೆ. ಎಂದು ಹೋರಾಟ ಸಮಿತಿಯವರು ಹೇಳಿಕೊಂಡಿದ್ದಾರೆ.