ಪಂಜ: ಅರ್ಧ ಏಕಾಹ ಭಜನೆ-ದೀಪ ಪ್ರಜ್ವಲನೆ

0

🔸 ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ


🔸 ನಾಳೆ (ಎ.22) ಮುಂಜಾನೆ ತನಕ ಭಜನಾ ಸಂಕೀರ್ತನೆ

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಪಂಜ ಮತ್ತು ನಿಂತಿಕಲ್ಲು ವಲಯ , ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ
ಪಂಜ ಮತ್ತು ನಿಂತಿಕಲ್ಲು ವಲಯ ಇದರ ಆಶ್ರಯದಲ್ಲಿ 14ನೇ ವರ್ಷದ ಉಚಿತ ಭಜನಾ ತರಬೇತಿ ಶಿಬಿರವು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಎ.21 ರಂದು ಸಮಾರೋಪ ಗೊಂಡು ಅರ್ಧ ಏಕಾಹ ಭಜನೆಗೆ ದೀಪ ಪ್ರಜ್ವಲನೆ ನಡೆಯಿತು.ಬಳಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಪ್ರಾರಂಭ ಗೊಂಡಿತು.


ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ಅರ್ಧ ಏಕಾಹ ಭಜನೆಗೆ ದೀಪ ಪ್ರಜ್ವಲನೆ ನಡೆಸಿದರು.


ಭಜನಾ ತರಬೇತಿ ಶಿಬಿರದ ಸಂಚಾಲಕ ಕುಸುಮಾಧರ ಕೆಮ್ಮೂರು ಸಭಾಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶ್ರೀಮತಿ ಪ್ರಿಯಾ ಎನ್, ಶ್ರೀಮತಿ ಉಷಾ ಕಲ್ಯಾಣಿ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ , ಪುತ್ತೂರು ಧರ್ಮಸ್ಥಳ ಗ್ರಾಮದಲ್ಲಿ ಯೋಜನೆ ಕಚೇರಿಯ ಮ್ಯಾನೇಜರ್ ಜನಾರ್ಧನ, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ದುಗ್ಗಲಡ್ಕ, ಸ್ಥಾಪಕಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಮತ್ತು ಪಂಜ ಶಾರದಾಂಬ ಭಜನ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ,ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ ,ಭಜನಾ ಶಿಬಿರದ ಕಾರ್ಯದರ್ಶಿ ನಾರಾಯಣ ಶಿರಾಜೆ, ತರಬೇತುದಾರರಾದ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ, ಒಡಿಯೂರು ಯೋಜನೆಯ ಸಂಯೋಜಕಿ ಶ್ರೀಮತಿ ಸರಿತಾ ಪೆರ್ಮಾಜೆ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಮೋಹನ್ ಎಣ್ಣೆಮಜಲು , ಭಜನಾ ಮಂಡಳಿ ಪೂರ್ವಾಧ್ಯಕ್ಷ ಮಹಾಲಿಂಗ ಸಂಪ, ಜಿನ್ನಪ್ಪ ಗೌಡ ಗುಂಡಡ್ಕ, ಪದಾಧಿಕಾರಿಗಳು,ಸರ್ವ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.