ಸುಳ್ಯ ಸಿಟಿ ಸ್ವಲ್ಪ ಡೆವಲಪ್ ಆಗಿದೆ – ಗ್ರಾಮೀಣ ಭಾಗ ಇನ್ನೂ ಹಾಗೇ ಇದೆ

0


ಸುಮನಳಿಗೆ ಬಡವರ ಕಷ್ಟ ಗೊತ್ತಿದೆ- ಸ್ಪಂದನೆ ನೀಡುತ್ತಾಳೆ


ಅವರಳನ್ನು ಸುಳ್ಯದ ಜನತೆ ಈ ಬಾರಿ ಗೆಲ್ಲಿಸಿ ; ಸ್ನೇಹಿತರ ಮನವಿ

`’ನಾವೆಲ್ಲ ಸುಳ್ಯದ ಕೆ.ವಿ.ಜಿ. ವಿದ್ಯಾಸಂಸ್ಥೆಯಲ್ಲಿ ಓದಿದವರು. ಆ ಸಂದರ್ಭ ಸುಳ್ಯ ಸಿಟಿಯನ್ನು ನಾವು ಸುತ್ತಿದ್ದೆವು. ಸ್ವಲ್ಪ ಡೆವಲಪ್ ಆದಂತೆ ಕಾಣುತ್ತಿತ್ತು. ಈಗ ಸುಳ್ಯದ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು ಅಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಗಮನಿಸಿzವೆ. ಈ ಬಾರಿ ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದ ಎಎಪಿ ಅಭ್ಯರ್ಥಿಯಾಗಿ ನಮ್ಮ ಸ್ನೇಹಿತೆ ಶ್ರೀಮತಿ ಸುಮನ ಬೆಳ್ಳಾರ್ಕರ್ ಸ್ಪರ್ಧಿಸುತ್ತಿದ್ದು ಅವಳನ್ನು ಸುಳ್ಯದ ಅಭಿವೃದ್ಧಿಗಾಗಿ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಸುಮನ ಬೆಳ್ಳಾರ್ಕರ್ ಸ್ನೆಹಿತರಾದ ಪ್ರದೀಪ್ ತುಮಕೂರು, ಲೋಹಿತ್ ಮದ್ದೂರು, ವಿಜಯ ಭಗವಾನ್ ತರಿಕೆರೆ, ವೇದರಾಜ್ ರಾಮನಗರ ಹೇಳಿದ್ದಾರೆ.


ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಮ್ಮ ಸ್ನೇಹಿತೆ ಸುಮನ ಸುಳ್ಯ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾಳೆ. ಅವಳ ಗೆಲುವಿಗಾಗಿ ನಾವೆಲ್ಲರೂ ಕಳೆದ ೧೦ -೨೦ ದಿನಗಳಿಂದ ಸುಳ್ಯದಲ್ಲಿದ್ದು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿzವೆ. ನಾವು ಸುಳ್ಯದಲ್ಲಿ ಓದುತ್ತಿದ್ದಾಗ ಸುಳ್ಯ ಸಿಟಿ ಬಿಟ್ಟು ಹೊರಗೆ ಹೋಗಿರಲಿಲ್ಲ. ಈಗ ಹೋದಾಗ ಗ್ರಾಮೀಣ ಭಾಗ ಅಭಿವೃದ್ಧಿಯಾಗದೇ ಅಲ್ಲಿಯ ಜನರು ಕಷ್ಟ ಪಡುತ್ತಿರುವುದು ಕಣ್ಣಾರೆ ಕಂಡಿzವೆ. ಸಣ್ಣ ಗುಡಿಸಲಿನಲ್ಲಿ ವಾಸಿಸುವ ಕುಟುಂಬಗಳು, ಹಕ್ಕುಪತ್ರ ಸಿಗದೇ ಸಮಸ್ಯೆ ಹೇಳಿಕೊಳ್ಳುವವರು, ರಸ್ತೆ ಸಮಸ್ಯೆ, ನೀರು, ವಿದ್ಯುತ್ ಸಮಸ್ಯೆಯನ್ನು ಹೇಳಿಕೊಳ್ಳುವವರು ಹಲವರಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ನಾಯಕರು ಬೇಕು. ನಮ್ಮ ಸ್ನೇಹಿತೆ ಸುಮನ ಕಷ್ಟಗಳಿಗೆ ಸ್ಪಂದನೆ ನೀಡುವವಳು. ಸಹಾಯ ಹಸ್ತ ನೀಡಿದವಳು. ಕಾಲೇಜು ಜೀವನದಲ್ಲೇ ಅವಳಲ್ಲಿ ನಾಯಕತ್ವ ಸ್ವಭಾವವನ್ನು ನಾವು ಗಮನಿಸಿzವೆ. ಅವಳು ಗೆದ್ದರೆ ಕ್ಷೇತ್ರ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ವಿಶೇಷ ಅನುದಾನ ತರಿಸಿ ಇಲ್ಲಿ ಅಭಿವೃದ್ದಿ ಕಾರ್ಯ ನಡೆಸುತ್ತಾಳೆಎನ್ನುವುದು ನಮಗೆ ವಿಶ್ವಾಸವಿದೆ. ಸುಳ್ಯ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾಳೆ ಎಂದು ಅವರು ಹೇಳಿದರು.