‌ಅಧಿಕಾರಿಗಳ ಎಡವಟ್ಟಿನಿಂದಾಗಿ ಮತಚೀಟಿಯಲ್ಲಿ‌ ಹೆಸರು ಕಾಣೆ

0

ಗುರುತಿನ‌ ಚೀಟಿ ಇದ್ದರೂ ಮತದಾನದ ಹಕ್ಕು ಕಳೆದುಕೊಂಡ ಮರ್ಕಂಜದ ಆರು ಮತದಾರರು

ಅಧಿಕಾರಿಗಳ ಎಡವಟ್ಟಿನಿಂದಾಗಿ ಮರ್ಕಂಜದ ಆರು ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ.

ಎಂದಿನಂತೆ ಮತ ಹಾಕಲು‌ ಮತಗಟ್ಟೆಗೆ ತೆರಳಿದಾಗ ಮತಚೀಟಿಯಲ್ಲಿ ಮತದಾರರ ಹೆಸರಿಲ್ಲದ ಕಾರಣ ಮತಗಟ್ಟೆಯ ಸಿಬ್ಬಂದಿಗಳು ಮತದಾನಕ್ಕೆ‌ ಅವಕಾಶ ನೀಡಲಿಲ್ಲ. ಹೀಗಾಗಿ ಮತದಾನದ ಹಕ್ಕನ್ನು ಕಳೆದುಕೊಂಡ ಮತದಾರರು ನಿರಾಸೆಯಿಂದ‌ ಮತಗಟ್ಟೆಯಿಂದ ಹೊರಬಂದು ತಮ್ಮ ತಮ್ಮ ಕಾರ್ಯಕರ್ತರೊಂದಿಗೆ ಮತ್ತು ಅಲ್ಲಿದ್ದ ಪತ್ರಕರ್ತರೊಂದಿಗೆ ತಮ್ಮ ಅಸಮಧಾನ ತೋಡಿಕೊಂಡರು.