ಡೆಪಾಸಿಟ್ ಇಟ್ಟ ಕೋವಿ ಹಿಂತಿರುಗಿಸುವಂತೆ ಕೃಷಿಕರ ಒತ್ತಾಯ

0

ವಿಧಾನಸಭಾ ಚುನಾವಣೆಯ‌ ಹಿನ್ನೆಲೆಯಲ್ಲಿ ಡೆಪಾಸಿಟ್ ಇಟ್ಟ ಕೋವಿಗಳನ್ನು ಮರಳಿಸಬೇಕೆಂದು ಕೃಷಿಕರು ಒತ್ತಾಯಿಸಿದ್ದಾರೆ.


ಚುನಾವಣೆ ಮುಗಿದು, ಎಣಿಕೆ ಕಾರ್ಯ ಮುಗಿದು ಫಲಿತಾಂಶವು ಘೋಷಣೆಯಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆದಿರುವುದು ಸಂತೋಷ. ಆದರೆ ನಮ್ಮ ತೋಟಗಳಲ್ಲಿ ಮಂಗ ಮತ್ತಿತರ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ.


ಹೀಗಾಗಿ ಅವುಗಳನ್ನು ಓಡಿಸಲು ನಮಗೆ ಕೋವಿಯ ಅಗತ್ಯವಿದೆ. ಆದಷ್ಟು ಬೇಗ ಹಿಂತಿರುಗಿಸಬೇಕೇಂದು ಕೃಷಿಕರು ವಿನಂತಿಸಿದ್ದಾರೆ.