ವಳಲಂಬೆ : ಕಿರಣ ಯೋಗ ತರಬೇತಿ ಶಿಬಿರ ಉದ್ಘಾಟನೆ

0

ಯೋಗದಿಂದ ಆರೋಗ್ಯ – ಗಂಗಾಧರ ದಂಬೆಕೋಡಿ

ಕಿರಣ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಇದರ ವತಿಯಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ವಾರದ ಯೋಗ ತರಬೇತಿ ಶಿಬಿರ ಉದ್ಘಾಟನೆಗೊಂಡಿತು.

ನಿವೃತ್ತ ಯೋಧ ಗಂಗಾಧರ ದಂಬೆಕೋಡಿಯವರು ಶಿಬಿರವನ್ನು ಉದ್ಘಾಟಿಸಿದರು.
ಕಿರಣ ಸಂಸ್ಥೆಯ ಅಧ್ಯಕ್ಷ ಯೋಗೀಶ್ ಹೊಸೊಳಿಕೆ ಅಧ್ಯಕ್ಷತೆ ವಹಿಸಿದ್ದರು.
ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ತರಬೇತುದಾರರಾ ಗಿದ್ದಾರೆ.
ಸನತ್ ಮುಳುಗಾಡು, ರಾಜೇಶ್ ಮಾವಿನಕಟ್ಟೆ, ಶಶಿ ದೇರಾಜೆ, ಕೇಶವ ಕೊರಂಬಡ್ಕ, ಕುಶಾಲಪ್ಪ ಹೊಸೊಳಿಕೆ, ನವೀನ್ ಪುಚ್ಚಪಾಡಿ ಶಿಬಿರಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.