ನಿವೃತ್ತ ಸಬ್ ಇನ್ಸ್ ಪೆಕ್ಟರ್ ಬಾಲಣ್ಣ ಗೌಡ ಮಳಿ ನಿಧನ

0

ಕನಕಮಜಲು ಗ್ರಾಮದ ಮಳಿ ನಿವಾಸಿ ಮಂಗಳೂರಿನ ಕೆ.ಎಸ್. ಆರ್.ಪಿ. ಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿದ್ದ ಬಾಲಣ್ಣ ಗೌಡ ಅವರು ಅಸೌಖ್ಯದಿಂದಾಗಿ ಮೇ.16ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಬೆಂಗಳೂರಿನ ಕೆ.ಎಸ್.ಆರ್.ಪಿ. ಯಲ್ಲಿ ಪೊಲೀಸ್ ಕಾನಸ್ಟೇಬಲ್ ಆಗಿ ಕರ್ತವ್ಯ ಪ್ರಾರಂಭಿಸಿ,ಬಳಿಕ ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯ ವಿವಿಧ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ, 2018ರಲ್ಲಿ ನಿವೃತ್ತಿ ಹೊಂದಿದ್ದರು.

ಮೃತರು ಪತ್ನಿ ಸುಶೀಲ, ಪುತ್ರರಾದ ಅರುಣ್ ಎಂ. ಬಿ., ಪುತ್ರಿ ಸ್ವಾತಿ ಎಂ.ಬಿ. ಸೊಸೆ ಹವ್ಯಶ್ರೀ ಜಿ.ಪಿ. ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.