2000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಿರುವ RBI

0

ಬದಲಾಯಿಸಲು ಸೂಚನೆ

2000 ರೂ.ಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆ. ಅಲ್ಲದೇ 2023ರ ಸೆಪ್ಟೆಂಬರ್ 30ರ ಒಳಗಡೆ ನೋಟುಗಳನ್ನು ಬದಲಾಯಿಸಬೇಕಾಗಿ RBI ಸೂಚಿಸಿದೆ.

ಸರಿಯಾದ ಸಮಯದಲ್ಲಿ ಬದಲಾವಣೆಗಳನ್ನು ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಸಮಯ ಲಭ್ಯವಾಗಲು ಎಲ್ಲಾ ಬ್ಯಾಂಕ್‌ಗಳಲ್ಲಿ ಸೆಪ್ಟೆಂಬರ್ 30, 2023ರವರೆಗೆ ಅವಕಾಶ ನೀಡಲಾಗಿದೆ ಎಂದು ಸುತ್ತೋಲೆ ತಿಳಿಸಿದೆ.

“2000ರೂ. ಮುಖಬೆಲೆಯ ನೋಟುಗಳನ್ನು 2016ರ ನವೆಂಬರ್ ನಲ್ಲಿ ಪರಿಚಯಿಸಲಾಯಿತು. ಆ ಸಂದರ್ಭದಲ್ಲಿ 500 ಮತ್ತು 1000ರೂ. ನೋಟುಗಳನ್ನು ಹಿಂಪಡೆದಿದ್ದ ಕಾರಣ ಆರ್ಥಿಕತೆ ಸುಸ್ಥಿತಿಯಲ್ಲಿ ಸಾಗಲು 2000ರೂ. ನೋಟುಗಳನ್ನು ಮುದ್ರಿಸಲಾಯಿತು. ಈ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಬಳಿಕ 2018ರಲ್ಲಿ 2000 ರೂ. ನೋಟುಗಳ ಮುದ್ರಣ ನಿಲ್ಲಿಸಲಾಯಿತು’ ಎಂದು ಸುತ್ತೋಲೆ ಉಲ್ಲೇಖಿಸಿದೆ.

LEAVE A REPLY

Please enter your comment!
Please enter your name here