ಇಂದು ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರಮಾಣ ಸ್ವೀಕಾರ ಸಮಾರಂಭ

0

ನೇರ ಪ್ರಸಾರದಲ್ಲಿ ಸುಳ್ಯ ಬಸ್ ನಿಲ್ದಾಣ ಬಳಿ ಎಲ್ ಇ ಡಿ ಪರದೆಯ ಮೂಲಕ ವೀಕ್ಷಣೆಗೆ ಅವಕಾಶ

ಕಾಂಗ್ರೆಸ್ ನಿಂದ ಸುಳ್ಯದಲ್ಲಿ ವಾಹನ ಜಾಥಾ, ಸಂಭ್ರಮಾಚರಣೆ

ಇಂದು ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ರವರೂ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ‌ ಭಾಗವಹಿಸಲು ಸುಳ್ಯದ ಹಲವು ಕಾಂಗ್ರೆಸ್ ಮುಖಂಡರು ತೆರಳಿದ್ದಾರೆ. ಪ್ರಮುಖ ಮುಖಂಡರು, ಸುಳ್ಯ ಕ್ಷೇತ್ರದ ನೂರಾರು ಮಂದಿ
ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಸುಳ್ಯ ಬಸ್ ನಿಲ್ದಾಣ ಬಳಿ ಕಾಂಗ್ರೆಸ್ ಸಂಭ್ರಮಾಚರಣೆ

ಪ್ರಮಾಣವಚನದ ಅಂಗವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸಂಭ್ರಮಾಚರಣೆ ನಡೆಯಲಿದೆ. ಮಧ್ಯಾಹ್ನ 12 ರಿಂದ ಸುಳ್ಯ ಖಾಸಗಿ ಬಸ್ಸುನಿಲ್ದಾಣದ ಬಳಿ ಸಂಭ್ರಮಾಚರಣೆ ನಡೆಯಲಿದೆ.
ಸುಳ್ಯ ಬಸ್ ನಿಲ್ದಾಣ ಎಲ್ ಇ ಡಿ ಪರದೆಯ ಮೂಲಕ ಪ್ರಮಾಣವಚನ ನೇರಪ್ರಸಾರವನ್ನು ಪ್ರಸಾರ ಮಾಡಲಿದೆ.
ಕಾರ್ಯಕ್ರಮದ ಮುಂಚಿತವಾಗಿ ಬೆಳಿಗ್ಗೆ 11 ಗಂಟೆಗೆ ಸುಳ್ಯದ ಜ್ಯೋತಿ ವೃತ್ತದಿಂದ ಸುಳ್ಯ ನಗರದಲ್ಲಿ ದ್ವಿಚಕ್ರ ವಾಹನ ಜಾಥ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ ತಿಳಿಸಿದ್ದಾರೆ.

ಸುದ್ದಿ ಚಾನೆಲ್ ನೇರಪ್ರಸಾರ

ಬೆಂಗಳೂರಿನಲ್ಲಿ ನಡೆಯುವ ಪ್ರಮಾಣವಚನ ಕಾರ್ಯಕ್ರಮ‌ ಮತ್ತು ಸುಳ್ಯದಲ್ಲಿ ನಡೆಯುವ ಕಾಂಗ್ರೆಸ್ ಸಂಭ್ರಮಾಚರಣೆ, ನಾಯಕರ ಪ್ರತಿಕ್ರಿಯೆಗಳನ್ನು ಸುದ್ದಿ ಚಾನೆಲ್ ನೇರ ಪ್ರಸಾರ ಮಾಡಲಿದೆ.

LEAVE A REPLY

Please enter your comment!
Please enter your name here