ಪಂಜ : ಗಾಳಿ ಮಳೆಗೆ ಧರೆಗುರುಳಿದ ಅಡಿಕೆ ಮರಗಳು

0

ಪಂಜ ಪರಿಸರದಲ್ಲಿ ಮೇ.೧೮ ರಂದು ಸಂಜೆ ಭಾರೀ ಗಾಳಿ ಮಳೆಗೆ ಕೆಲವು ಕಡೆ ಹಾನಿಯಾದ ಘಟನೆ ವರದಿಯಾಗಿದೆ.
ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮದ ಅನೇಕ ಕಡೆ ಕೃಷಿ ತೋಟಕ್ಕೆ ಗಾಳಿ ನುಗ್ಗಿದ್ದು ನೂರಾರು ಅಡಿಕೆ ಮರ, ರಬ್ಬರ್ ಮರ ಧರರೆಗೆ ಉರುಳಿದ್ದು ಕೃಷಿಕರಿಗೆ ನಷ್ಟ ಉಂಟಾಗಿದೆ.


ಪಂಜ ಗ್ರಾಮ ಪಂಚಾಯತ್ ಸಮೀಪವಿರುವ ಮರವೊಂದು ಅರ್ಧದಿಂದ ಮುರಿದು ಬಿದ್ದು ಗ್ರಾಮ ವನ್ ಕಚೇರಿಯ ಮಾಡಿಗೆ ಹಾನಿಯಾಗಿದೆ.ಅದರ ಸಮೀಪ ಇರುವ ಗ್ರಾಮ ಪಂಚಾಯತ್ ಕಚೇರಿ ಕಟ್ಟಡಕೂ ಹಾನಿಯಾಗಿದೆ.
ಪಂಜ ಪೇಟೆಯಲ್ಲಿ ಎರಡು ಅಂಗಡಿಗಳ ಮಾಡಿನ ಶೀಟ್ ಹಾರಿ ಹಾನಿಯಾಗಿದೆ.

LEAVE A REPLY

Please enter your comment!
Please enter your name here