ಕೊಲ್ಲಮೊಗ್ರು: ಸರ್ಕಾರಿ ಆಸ್ತಿಗೆ ಹಾನಿ – ಕ್ರಮಕ್ಕೆ ಆಗ್ರಹ

0

ಕೊಲ್ಲಮೊಗ್ರದ ಹಾಲಿನ ಡೈರಿ ಹಾಗೂ ಪಶು ಆಸ್ಪತ್ರೆಯ ತಡೆಗೋಡೆಗೆ ಕಾಂಕ್ರೀಟ್ ಮಿಕ್ಸಿಂಗ್ ವಾಹನ ಗುದ್ದಿದ ಪರಿಣಾಮ ತಡೆಗೋಡೆ ಕುಸಿದ ಘಟನೆ ವರದಿಯಾಗಿದೆ. ರಸ್ತೆ ಕಾಮಗಾರಿ ನಡೆಸಲು ಬಂದ ಮಿಲನ್ ಸಂಸ್ಥೆ ಗೆ ಸೇರಿದ ವಾಹನವು ತಡೆಗೋಡೆಗೆ ಗುದ್ದಿದ್ದು ಕಂಪೌಂಡ್‌ನ ಒಂದಷ್ಟು ಭಾಗ ಕುಸಿದು ಬಿದ್ದಿದೆ. ಇದನ್ನು ಗ್ರಾಮಸ್ಥರು ಹಲವು ಸಲ ಪ್ರಶ್ನಿಸಿದ್ದರೂ ಯಾವುದೇ ರೀತಿಯ ಸ್ಪಂದನೆ ನೀಡದೇ ಗುತ್ತಿಗೆದಾರರು ಜಾರಿಕೊಂಡಿದ್ದಾರೆ. ಈ ಬಗ್ಗೆ ಪಂಚಾಯತ್ ದೂರು ನೀಡಲಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ಗೆ ಹಾನಿ ಮಾಡಿರುವುದು ಗೊತ್ತಿದ್ದರೂ ಇದರ ಬಗ್ಗೆ ಯಾರೂ ಕ್ರಮ ಕೈಗೊಳ್ಳದೇ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.