ನಾವೂರು: ಅಪಾಯದ ಮುನ್ಸೂಚನೆ ನೀಡುತ್ತಿರುವ ವಿದ್ಯುತ್ ಕಂಬ

0

ದಿನನಿತ್ಯ ನೂರಾರು ವಾಹನಗಳು ಮತ್ತು ಸಾರ್ವಜನಿಕರ ಓಡಾಟ

ಸುಳ್ಯ ನಾವೂರು ಕಾಲೋನಿಯ ಹೊಸದಾಗಿ ಕಾಂಕ್ರಿಟೀಕರಣಗೊಂಡ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಕೆಳಭಾಗದಲ್ಲಿ ಸಂಪೂರ್ಣವಾಗಿ ತುಂಡಾಗಿದ್ದು ಕೇವಲ ಎರಡು ತಂತಿಯ ಆಕಾರದ ಕಬ್ಬಿಣದ ರಾಡಿನಲ್ಲಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ.


ಸುಬ್ರಹ್ಮಣ್ಯ ಲೈನಿನಿಂದ ಬರುವ ವಿದ್ಯುತ್ ಈ ಕಂಬದಲ್ಲಿ ಹಾದು ಹೋಗುತ್ತಿದ್ದು ಇದರ ಕೆಳಗಡೆ ದಿನನಿತ್ಯ ನೂರಾರು ವಾಹನಗಳು ಮತ್ತು ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಜೋರಾಗಿ ಗಾಳಿ ಬೀಸಿದರೆ ಬೀಳುವ ಸ್ಥಿತಿಯಲ್ಲಿ ಇರುವ ಈ ಕಂಬ ಮುಂದೊಂದು ದಿನ ಭಾರಿ ಅನಾಹುತ ಉಂಟು ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಕಂಬವನ್ನು ಬದಲಿಸುವ ಕಾರ್ಯ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.