ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆಗೆ ಐಎಂಎ ರಾಜ್ಯಾಧ್ಯಕ್ಷ ಡಾ.ಶಿವಕುಮಾರ್ ಲಕ್ಕೊಳ್ ಭೇಟಿ

0

ಸೇವೆಯೊಂದಿಗೆ ಅಸ್ಥಿತ್ವತೆ ಉಳಿಸಿಕೊಳ್ಳಿ : ಐಎಂಎ ರಾಜ್ಯಾಧ್ಯಕ್ಷ ಕರೆ

ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆಗೆ ರಾಜ್ಯಾಧ್ಯಕ್ಷ ಡಾ.ಶಿವಕುಮಾರ್ ಲಕ್ಕೊಳ್ ಮೇ.26ರಂದು ಭೇಟಿ ನೀಡಿದರು.

ಸುಳ್ಯದ ಕುರುಂಜಿ ಭಾಗ್‌ನ ಶೀತಲ್ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ವೈದ್ಯರ ಕುಟುಂಬ ಮಿಲನ ಹಾಗೂ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಜನರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವ ವೈದ್ಯರು ತಮ್ಮ ಸೇವೆಯೊಂದಿಗೆ ಅಸ್ಥಿತ್ವತೆಯನ್ನು ಉಳಿಸಿಕೊಳ್ಳಬೇಕೆಂದು” ಕರೆ ನೀಡಿದರು.

ಸುಳ್ಯ ಐಎಂಎ ಅಧ್ಯಕ್ಷೆ ಡಾ.ವೀಣಾ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, “ಎಲ್ಲಾ ವೈದ್ಯರು ಒಂದೇ ಕುಟುಂಬದಂತೆ ಇರಲು ಐಎಂಎ ಸಹಕಾರಿಯಾಗಿದೆ” ಎಂದರು.

ವೇದಿಕೆಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ಡಾ.ಲಕ್ಷ್ಮಣ್ ಭಾಸ್ಕರ್, ಐಎಂಎ ಸುಳ್ಯ ಘಟಕದ ನಿಕಟಪೂರ್ವಾಧ್ಯಕ್ಷ ಡಾ.ಗೀತಾ ದೊಪ್ಪ, ಕಾರ್ಯದರ್ಶಿ ಡಾ.ರವಿಕಾಂತ್, ಉಪಾಧ್ಯಕ್ಷ ಡಾ.ಕರುಣಾಕರ್ ಉಪಸ್ಥಿತಿರಿದ್ದರು. ಖಜಾಂಜಿ ಡಾ.ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಡಾ.ಅರುಣಾ ಸಿ.ಆರ್ ಭಟ್ ಪ್ರಾರ್ಥಿಸಿದರು. ಡಾ.ರಜನಿ ಐಎಂಎ ಪ್ರಾರ್ಥನೆ ನೆರೆವೇರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವೈದ್ಯರುಗಳಿಗೆ ಬಹುಮಾನ ವಿತರಣೆ ನಡೆಯಿತು.

ಸುಳ್ಯ ಐಎಂಎ ಘಟಕದ ವತಿಯಿಂದ ರಾಜ್ಯಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯಾಧ್ಯಕ್ಷರು ಕೂಡಾ ಡಾ.ವೀಣಾ ರವರನ್ನು ಗೌರವಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಡಾ.ವೀಣಾ, ಅವರ ಪುತ್ರ ಡಾ.ವಿನ್ಯಾಸ್ ಚಂದ್ರ ಹಾಗೂ ಡಾ.ಭವ್ಯರವರಿಂದ ಜಾಂಬವತಿ ಯಕ್ಷಗಾನ ಪ್ರಸಂಗ ನಡೆಯಿತು.