ಜಿಲ್ಲಾ ಮಟ್ಟದ ಅಂತರ್ ಕಾಲೇಜು ಡಾನ್ಸ್ ಸ್ಪರ್ಧೆಯಲ್ಲಿ ನಿಂತಿಕಲ್ಲು ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಡಾನ್ಸ್ ತಂಡ ಪ್ರಥಮ

0


ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸುಬ್ರಹ್ಮಣ್ಯ ಇವರು ಮೇ 27 ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಂಗಣದಲ್ಲಿ ನಡೆಸಿದ ಯುವಾಂಕುರ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಿಂತಿಕಲ್ಲಿನ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಾಳಿಂಗ ಮರ್ಧನ ರೂಪಕ ಪ್ರಥಮ ಪ್ರಶಸ್ತಿಯೊಂದಿಗೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ಪಡೆಯಿತು. ತಂಡವನ್ನು ಭೌತಶಾಸ್ತ್ರ ಉಪನ್ಯಾಸಕರಾದ ಉಜ್ವಲ್ ಕೆ.ಎಚ್ ಮತ್ತು ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಜಯಶ್ರೀ ಪಿ.ವಿ ಮುನ್ನಡೆಸಿದ್ದರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ಅಭಿನಂದಿಸಿದರು.