ಸೇವಾಜೆ ಕಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬ – ರಂಗ ಮಂದಿರ ಉದ್ಘಾಟನೆ – ಸನ್ಮಾನ

0

ಕಳೆಗಟ್ಟಿದ ಸಾಂಸ್ಕೃತಿಕ ಕಾರ್ಯಕ್ರಮ

ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮವು ಮೇ.27ರಂದು ಸೇವಾಜೆ ಶಾಲಾ ವಠಾರದಲ್ಲಿ ವಿಜ್ರಂಭಣೆಯಿಂದ ನಡೆಯಿತು.

ಪೂರ್ವಾಹ್ನ ನಡೆದ ‌ಸಭಾ ಕಾರ್ಯಕ್ರಮದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಲೋಚನಾ ದೇವ ಅಧ್ಯಕ್ಷತೆ ವಹಿಸಿದ್ದರು.‌
ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕೆ. ಧ್ವಜಾರೋಹಣ ನೆರವೇರಿಸಿದರು.


ಮುಖ್ಯ ಅಥಿತಿಗಳಾಗಿ ದೇವಚಳ್ಳ ಗ್ರಾ.ಪಂ.ಸದಸ್ಯೆ ಲೀಲಾವತಿ ಸೇವಾಜೆ, ಸದಸ್ಯೆ ಶ್ರೀಮತಿ ಪ್ರೇಮಲತಾ ಕೇರ, ಸದಸ್ಯೆ ಶ್ರೀಮತಿ ನಾಗವೇಣಿ ಉಪಸ್ಥಿತರಿದ್ದರು. ದೇವಚಳ್ಳದ ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಬಹುಮಾನ ವಿತರಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಕೃಷ್ಣ ನಂದಗೋಕುಲ, ಶೆಟ್ಟಿಮಜಲು ಚೈತನ್ಯ ಗೆಳೆಯರ ಬಳಗದ ಅಧ್ಯಕ್ಷ ದೇವಿಪ್ರಸಾದ್, ಶ್ರೀ ಕೃಷ್ಣ ಸಾಂ.ಸಂ.ಸೇವಾಜೆ ಇದರ ಅಧ್ಯಕ್ಷ ಜಯದೀಪ್ ಕರಂಗಿಲಡ್ಕ, ಬಾಲವಿಕಾಸ ಸಮಿತಿ ಸೇವಾಜೆ ಅಂಗನವಾಡಿಯ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಎಂ. ಉಪಸ್ಥಿತರಿದ್ದರು.

ರಾತ್ರಿ ಪ್ರಕೃತಿ ಕಲಾ ವೇದಿಕೆಯ ಉದ್ಘಾಟನೆ ಮತ್ತು‌ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು| ಭಾಗೀರಥಿ ಮುರುಳ್ಯ ವಹಿಸಿದ್ದರು. ಬೆಳ್ಳಿ ಹಬ್ಬದ ಸವಿನೆನಪಿಗೆ ನಿರ್ಮಿಸಿದ ಪ್ರಕೃತಿ ಕಲಾ ವೇದಿಕೆಯನ್ನು ಮತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇಲ್ಲಿಯ ರಂಗ ಮಾಂತ್ರಿಕ ಡಾ.ಜೀವನ್ ರಾಮ್ ಸುಳ್ಯ ನೆರವೇರಿಸಿದರು.
ಮೂಡಬಿದಿರೆ ಜೈನ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಭಾತ್ ಬಲ್ನಾಡು ಅಭಿನಂದನಾ ಭಾಷಣ ಮಾಡಿದರು.

ಅತಿಥಿಗಳಾಗಿ ದೇವಚಳ್ಳ ಗ್ರಾ.ಪಂ. ಸದಸ್ಯ ಶೈಲೇಶ್ ಅಂಬೆಕಲ್ಲು, ಜಿ.ಪಂ.ನ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಟಿಎಪಿಸಿಎಂಎಸ್ ಸುಳ್ಯ ಇದರ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನಾರಾಯಣ ಗೌಡ ಮಾವಿನಗೋಡ್ಲು, ನಾರಾಯಣ ಗೌಡ ಬಾಳೆತೋಟ, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ರೈ ಸೇವಾಜೆ, ಎಸ್ ಡಿಎಂಸಿ ಅಧ್ಯಕ್ಷ ಶಾಂತಪ್ಪ ರೈ ಅಂಗಡಿಮಜಲು, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಮುರಳಿಕೃಷ್ಣ ಉಪಸ್ಥಿತರಿದ್ದರು.

ಬೆಳ್ಳಿ ಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾನಂದ ಪಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ ಟಿ. ವರದಿ ಮಂಡಿಸಿದರು.
ಹಂಸಿಕಾ ಪ್ರಾರ್ಥಿಸಿದರು.

ಬೆಳ್ಳಿ ಹಬ್ಬದ ಪ್ರಯುಕ್ತ ಸಭಾ ಕಾರ್ಯಕ್ರಮದ ಮೊದಲು ಮತ್ತು ನಂತರ ಅಂಗನವಾಡಿ ಮಕ್ಕಳಿಂದ, ಶಾಲಾ ಮಕ್ಕಳಿಂದ, ಹಳೆ ವಿದ್ಯಾರ್ಥಿ ಸಂಘದವರಿಂದ ಹಾಗೂ ವಿವಿಧ ಸಂಘ ಸಂಸ್ಥೆಯವರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ದೇವಚಳ್ಳ ಮತ್ತು ಮರ್ಕಂಜ, ನವೋದಯ ಸಂಘದ ಒಕ್ಕೂಟ ದೇವಚಳ್ಳ ಮತ್ತು ಮರ್ಕಂಜ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇವಚಳ್ಳ ಮತ್ತು ಮರ್ಕಂಜ, ಶ್ರೀಕೃಷ್ಣ ಸಾಂಸ್ಕೃತಿಕ ಸಮಿತಿ ಸೇವಾಜೆ, ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು, ಶಾಲಾಭಿಮಾನಿಗಳು ಸಹಕರಿಸಿದರು.

ಇದೇ ಸಂದರ್ಭ ಶ್ರೀ ಕೃಷ್ಣ ಸಾ.ಸಂ.ಸೇವಾಜೆಯವರು ಕೊಡಮಾಡಿದ ಹೂವಿನ ತೋಟವನ್ನು ಗಣ್ಯರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲೆಗಾಗಿ ದುಡಿದವರನ್ನು, ಶಾಲಾ ಶಿಕ್ಷಕರನ್ನು ಗೌರವಿಸಲಾಯಿತು.