ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ.ಕೃ.ಸ.ಸಂಘದ ಕ್ಯಾಶಿಯರ್ ಕಮಲ ಎ.ಆರ್. ಇಂದು ಸೇವಾ ನಿವೃತ್ತಿ

0


ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ.ಕೃ.ಪ.ಸ. ಸಂಘದ ಹಿರಿಯ ಗುಮಾಸ್ತೆಯಾಗಿ ಸೇವೆ ಸಲ್ಲಿಸುತಿದ್ದ ಕಮಲ ಎ ಆರ್ ಇಂದು (ಮೇ.31 ರಂದು) ಸೇವಾ ನಿವೃತ್ತಿ ಹೊಂದಲಿದ್ದಾರೆ.
1987 ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇವೆಗೆ ಸೇರಿದ್ದು, 1990 ರಲ್ಲಿ ಕ್ಲರ್ಕ್ ಆಗಿ ಖಾಯಂಗೊಂಡಿದ್ದರು. ಕಳೆದ 2೦ ವರ್ಷಗಳಿಂದ ಕ್ಯಾಶಿಯರ್ ಆಗಿ ಸೇವೆ ಸಲ್ಲಿಸುತಿದ್ದು ಕಳೆದೊಂದು ವರ್ಷಗಳ ಹಿಂದೆ ಹಿರಿಯ ಗುಮಾಸ್ತೆಯಾಗಿ ಭಡ್ತಿ ಹೊಂದಿದ್ದರು. ಒಟ್ಟು 36 ವರ್ಷಗಳ ಸೇವೆ ಪೂರೈಸಿದ್ದಾರೆ. ವಿದ್ಯಾಭ್ಯಾಸದ ಬಳಿಕ ಆರಂಭದಲ್ಲಿ 4 ವರ್ಷಗಳ ಕಾಲ ಸುಬ್ರಹ್ಮಣ್ಯದ ಮಹಿಳಾ ಸೊಸೈಟಿಯ ಗುತ್ತಿಗಾರು ಶಾಖೆಯಲ್ಲಿ ಕೆಲ ತಿಂಗಳು ಸುಬ್ರಹ್ಮಣ್ಯ ಕೇಂದ್ರ ಕಛೇರಿಯಲ್ಲಿ ಸೇವೆ ಸಲ್ಲಿಸಿದ್ದರು.


ಕೊಲ್ಲಮೊಗ್ರು ಗ್ರಾಮದ ಗ್ರಾಮ ಕರಣಿಕರಾಗಿದ್ದ ದಿ|ರಾಮಣ್ಣ ಗೌಡ ಅಂಬೆಕಲ್ಲು ಅವರ ಪುತ್ರಿ, ಪತಿ ಕೃಷ್ಣಪ್ಪ ಖಂಡಿಗೆ ಹರಿಹರ ಪಲ್ಲತಡ್ಕದಲ್ಲಿ ಎಸ್.ವಿ ಕಾಂಪ್ಲೆಕ್ಸ್ ಹಾಗೂ ಕೆ.ಕೆ ಕಾಂಪ್ಲೆಕ್ಸ್ ಹೊಂದಿದ್ದು ದಿನಸಿ ಅಂಗಡಿ, ಹೊಟೇಲ್ ಉದ್ಯಮ ನಡೆಸುತಿದ್ದಾರೆ. ಪುತ್ರ ಕಿಶನ್ ಕೆ.ಕೆ, ಪುತ್ರಿ ಶ್ರೀಮತಿ ಪ್ರಪುಲ್ಲಾ ಶ್ರೀಕಾಂತ್ ಪಾರೆಪ್ಪಾಡಿ ದೇವಚಳ್ಳ ಗ್ರಾ.ಪಂ ನ ಗ್ರಂಥಾಲಯದ ಮೇಲ್ವಿಚಾರಕಿ.