ಸುಬ್ರಹ್ಮಣ್ಯ : ಕೆ.ಎಸ್.ಎಸ್. ಕಾಲೇಜಿನಲ್ಲಿ ಬೀದಿ ನಾಟಕ ಪ್ರದರ್ಶನ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಕುಸುಮಸಾರಂಗ ಮತ್ತು ಜಿಲ್ಲಾ ಪಂಚಾಯತ್ ದ. ಕ ಜಲ ಜೀವನ್ ಮಿಷನ್ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಂಘಟಿಸಿದ ಬೀದಿ ನಾಟಕ ಪ್ರದರ್ಶನಗೊಂಡಿತು.

ನೀರನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗ ಮಾಡಬೇಕು, ಕಾಡನ್ನು ಬೆಳೆಸಬೇಕು, ನೀರನ್ನು ಉಳಿಸುವುದು ನಮ್ಮಲ್ಲರ ಕರ್ತವ್ಯ ಎಂಬುದನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಕೆ. ಎಸ್. ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ದಿನೇಶ್ ಪಿ. ಟಿ ವಹಿಸಿದ್ದರು. IQAC ಘಟಕದ ಹಾಗೂ ಕುಸುಮಸಾರಂಗ ರಂಗ ಘಟಕದ ಮುಖ್ಯಸ್ಥರಾದ ಡಾ| ಗೋವಿಂದ ಎನ್. ಎಸ್, ಐ.ಇ . ಸಿ. ಸಂಯೋಜಕರಾದ ಸುರೇಶ್ ಬಾಳಿಲ ಹಾಗೂ ಕುಸುಮಸಾರಂಗ ರಂಗ ಘಟಕ ಸಂಚಾಲಕ ವಿನ್ಯಾಸ್.ಎಚ್, ಶ್ರೀಮತಿ ಪುಷ್ಪ.ಡಿ , ಕುಮಾರ್ ಎಸ್ ಮತ್ತು ಕಾಲೇಜಿನ ಉಪನ್ಯಾಸಕ ಬೃಂದ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು