ನೆಲ್ಲೂರು ಕೆಮ್ರಾಜೆ ಸೊಸೈಟಿ ಸಿಬ್ಬಂದಿ ಚನಿಯಪ್ಪ ಚೆನ್ನಡ್ಕ ಇಂದು ನಿವೃತ್ತಿ

0

ನೆಲ್ಲೂ ಕೆಮ್ರಾಜೆ ಪ್ರಾ.ಕೃ.ಪ.ಸಹಕಾರಿ ಸಂಘದಲ್ಲಿ ಸೇಲ್ಸ್ ಮೇನ್ ಕಂ ಅಟೆಂಡರ್‌ ಆಗಿದ್ದ ಚನಿಯಪ್ಪ ನಾಯ್ಕ ಚೆನ್ನಡ್ಕರವರು ಇಂದು (ಮೇ.31ರಂದು) ನಿವೃತ್ತಿ ಯಾಗಲಿದ್ದಾರೆ.
ಉಬರಡ್ಕ ಮಿತ್ತೂರು ಮತ್ತು‌ ನೆಲ್ಲೂರು ಕೆಮ್ರಾಜೆ ಜಂಟಿಯಾಗಿ ಉಬರಡ್ಕದಲ್ಲಿ ಇದ್ದ ವೇಳೆ 1984ರಲ್ಲಿ ದಿನಗೂಲಿ ನೌಕರನಾಗಿ ಸೇವೆಗೆ ಸೇರ್ಪಡೆಗೊಂಡು, 1987ರಲ್ಲಿ ಖಾಯಂ ನೌಕರರಾದರು. 1989ರಲ್ಲಿ ಸೇಲ್ಸ್ ಕಂ ಅಟೆಂಡರ್ ಆಗಿ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘ ಎಲಿಮಲೆ ಮತ್ತು ಬೊಳ್ಳಾಜೆ ಶಾಖೆಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಒಟ್ಟು 39 ವರ್ಷ ಸೇವೆ ಸಲ್ಲಿಸಿರುವ ಇವರು ಮೇ.31ರಂದು ನಿವೃತ್ತಿಗೊಳ್ಳಲಿದ್ದಾರೆ. ಅದೇ ದಿನ ಅವರಿಗೆ ಎಲಿಮಲೆಯ ಪ್ರಧಾನ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವು ನಡೆಯಲಿದೆ.
ಚನಿಯಪ್ಪರವರು ಚೆನ್ನಡ್ಕ ದಿ| ಗುಡ್ಡ ನಾಯ್ಕ ಮತ್ತು ದಿ| ಜಾನಕಿಯವರ ಪುತ್ರ. ಕುಸುಮ ಪತ್ನಿ. ರಕ್ಷಿತಾ ಮತ್ತು ಸುಜಿತ್ ಮಕ್ಕಳು.