ತೊಡಿಕಾನ : ಶಾಲಾ ಪ್ರಾರಂಭೋತ್ಸವ – ಅದ್ಧೂರಿ ಸ್ವಾಗತ

0

ತೊಡಿಕಾನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ. 31 ರಂದು ಅದ್ಧೂರಿಯಾಗಿ ಶಾಲಾ ಪ್ರಾರಂಭೋತ್ಸವ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.
ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯಿಂದ ಆರಂಭಗೊಂಡ ಅದ್ದೂರಿ ಮೆರವಣಿಗೆಗೆ ಎಸ್.ಡಿ.ಎಂ.ಸಿ. ಅಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ ಚಾಲನೆ ನೀಡಿದರು.

ಚೆಂಡೆ , ಮದ್ದಳೆ, ವಾದ್ಯ ಘೋಷದೊಂದಿಗೆ ಶಾಲಾ ಆವರಣದ ತನಕ ಮೆರವಣಿಗೆ ನಡೆಯಿತು. ಮೆರವಣಿಗೆಯ ಮಧ್ಯೆ ಅಲ್ಲಲ್ಲಿ ಪೋಷಕರು ಹಾಗೂ ಊರವರು ಸಿಹಿತಿಂಡಿ, ಶರಬತ್ತು ನೀಡಿ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಿದರು. ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಪೋಷಕರು ಸ್ವಾಗತಿಸಿದರು.


ಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ , ಎಸ್.ಡಿ.ಎಂ.ಸಿ ಅಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ , ಉಪಾಧ್ಯಕ್ಷೆ ಸೌಮ್ಯ ಭಟ್ , ಎಸ್. ಡಿ.ಎಂ.ಸಿ ಸದಸ್ಯರು , ಶಿಕ್ಷಕರು , ಮಕ್ಕಳ ಪೋಷಕರು ಹಾಜರಿದ್ದರು.